ಹೋಮ ಹವನ ನೆರವೇರಿಸಿ, ನಾಮಪತ್ರ ಸಲ್ಲಿಸಿದ ಸ್ಮೃತಿ ಇರಾನಿ

ಉತ್ತರಪ್ರದೇಶ: ಕೇಂದ್ರ ಸಚಿವೆ, ಬಿಜೆಪಿ ವರ್ಚಸ್ವೀ ನಾಯಕಿ ಸ್ಮೃತಿ ಇರಾನಿ ಇಂದು ಅಮೇಥಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಉಮೇದುವಾರಿಕೆ ಪತ್ರ ಸಲ್ಲಿಸಿದರು. ಉಮೇದುವಾರಿಕೆ ಸಲ್ಲಿಸುವುದಕ್ಕೂ ಮುನ್ನ ಸ್ಮೃತಿ ಇರಾನಿ, ತಮ್ಮ ಪತಿ ಜುಬಿನ್​ ಇರಾನಿ ಜೊತೆಗೂಡಿ ಸಾಂಪ್ರದಾಯಿಕವಾಗಿ ಹೋಮ ಹವನ ನೆರವೇರಿಸಿದರು. ಬಳಿಕ, ರೋಡ್​​ ಷೋ ಮೂಲಕ, ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಉಪಸ್ಥಿತರಿದ್ದರು.
ಕ್ಷೇತ್ರದಿಂದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. 2014ರ ಚುನಾವಣೆಯಲ್ಲಿ ಸ್ಮೃತಿ, ರಾಹುಲ್​ ಗಾಂಧಿ ವಿರುದ್ಧ ಸೋತಿದ್ದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv