ಅಯೋಗ್ಯ ಬದಲಾಗಿ “ಯೋಗ್ಯತೆ ಇಲ್ಲದ ಸಿಎಂ” ಅಂತಾ ಹೇಳ ಬಯಸುತ್ತೇನೆ -ಈಶ್ವರಪ್ಪ

ಗದಗ: ಮಾಧ್ಯಮದವರನ್ನು ರಕ್ಷಣೆ ಮಾಡಲು ಸಾಧ್ಯವಾಗದ ಸಿಎಂ ರಾಜ್ಯಕ್ಕೆ ಏಕೆ ಬೇಕು? ರಾಜ್ಯದ‌ ಮುಖ್ಯಮಂತ್ರಿಯಾಗಿದ್ದುಕೊಂಡು ಮಾಧ್ಯಮದವರನ್ನ ರಕ್ಷಣೆ ಮಾಡಲಾಗದಿದ್ರೆ ತಕ್ಷಣವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಅಂತಾ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹರಿಹಾಯ್ದಿದ್ದಾರೆ.

ಗದಗನಲ್ಲಿ ಬಿಜೆಪಿ ಪಕ್ಷದ ಪ್ರಚಾರದಲ್ಲಿ ಪಾಲ್ಗೊಂಡು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಚುನಾವಣೆಯಲ್ಲಿ ಮಾಧ್ಯಮಗಳ ಮೇಲೆ ಹಲ್ಲೆ ನಡೆಯುತ್ತೆ ಎಂದು ಸಿಎಂ ಹೇಳೊದು ಎಷ್ಟು ಸರಿ? ಮಾಧ್ಯಮದವರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತಾ‌ ಹೇಳಿದ್ರು. ಮಾಧ್ಯಮದವರನ್ನು ರಕ್ಷಣೆ ಮಾಡುವಂತಾ ಕೆಲಸ ಮಾಡಬೇಕು. ಆದ್ರೆ, ಸಿಎಂ ಪರೋಕ್ಷವಾಗಿ ಹಲ್ಲೆಕೋರರಿಗೆ ಸಹಾಯ ಮಾಡುವಂತಿದೆ‌ ಅಂತಾ‌ ಹೇಳಿದ್ರು. ಈ ಹಿಂದೆ ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗಲೂ ಬಿಜೆಪಿ ಮಾಧ್ಯಮಗಳ ರಕ್ಷಣೆಗೆ ನಿಂತಿತ್ತು, ಈಗಲೂ ನಿಲ್ಲುತ್ತದೆ ಅಂತಾ ಹೇಳಿದ್ರು. ಇದೇ ವೇಳೆ ಕುಮಾರಸ್ವಾಮಿ ಸಿಎಂ ಆಗಲು ಅಯೋಗ್ಯ ಎನ್ನುವ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಈಶ್ವರಪ್ಪ “ಅಯೋಗ್ಯ” ಎನ್ನುವ ಪದ ಅವರಿಗೆ ಬೇಸರ ಮೂಡಿಸಿದೆ ಅನಿಸುತ್ತೆ. ಅದಕ್ಕಾಗಿ ಅಯೋಗ್ಯ ಬದಲಾಗಿ “ಯೋಗ್ಯತೆ ಇಲ್ಲದ ಸಿಎಂ” ಎಂದು ಹೇಳಲು ಬಯಸುತ್ತೇನೆ ಅಂತಾ‌ ಹೇಳಿದ್ರು. ಕರ್ನಾಟಕದಲ್ಲಿ ವೈಚಾರಿಕ ಚರ್ಚೆ ನಡೆಯುತ್ತಿದೆ. ಆದ್ರೆ ಕಾಂಗ್ರೆಸ್ ಜೆಡಿಎಸ್ ನವರು ಜಾತಿ ಸಂಘರ್ಷ ಮಾಡ್ತಿದ್ದಾರೆ ಅಂತಾ‌ ಸಿಎಂ ವಿರುದ್ಧ‌ ಹರಿಹಾಯ್ದರು. ಅಲ್ಲದೇ‌ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಲು ಜನಸಾಗರವೇ ಹರಿದು ಬರುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಸರ್ಕಾರ‌ ನಿಶ್ಚಿತ ಅಂತಾ‌ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv