ಕುಮಾರಸ್ವಾಮಿ ನಿಮಗೆ ಕೊನೆಗಾಲ ಬಂದಿದೆ, ಸರ್ಕಾರವನ್ನ ಕಳೆದುಕೊಳ್ಳುತ್ತೀರಿ: ಕೆ.ಎಸ್. ಈಶ್ವರಪ್ಪ

ಬಾಗಲಕೋಟೆ: ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಜವಾಬ್ದಾರನಲ್ಲ ಎಂಬ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಗುಳೇದಗುಡ್ಡದಲ್ಲಿ ಈ ಕುರಿತು ಮಾತನಾಡಿದ ಅವರು, ಹಿಂದೆ ತುರ್ತು ಪರಿಸ್ಥಿತಿ ವೇಳೆ ಇಂದಿರಾಗಾಂಧಿ ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುವ ಪ್ರಯತ್ನ ಮಾಡಿದ್ದರು. ಅದರ ವಿರುದ್ಧ ನಾವು ಜೈಲಿಗೆ ಹೋಗಿ ಪತ್ರಿಕಾ ಸ್ವಾತಂತ್ರ್ಯ ತಂದೆವು. ಪತ್ರಿಕೆಗಳ ವಿರುದ್ಧ ಹೋಗಿದ್ದಕ್ಕೆ ಆಗ ಇಂದಿರಾಗಾಂಧಿ ಸರ್ಕಾರ ಕಳೆದುಕೊಂಡರು. ಇವತ್ತು ಕುಮಾರಸ್ವಾಮಿ ಮಾಧ್ಯಮದ ಸುದ್ದಿಗೆ ಹೋಗಿದ್ದಾರೆ.  ಹೀಗೆ ಮಾಡಿದರೆ ಖಂಡಿತ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತೀರಿ. ಸರ್ಕಾರವನ್ನು ಕಳೆದುಕೊಳ್ಳುತ್ತೀರಿ ಎಂದು ಈಶ್ವರಪ್ಪ, ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv