‘ಸೈನಿಕರೇ ನೀವು ವಿಮಾನ ದುರಂತದಲ್ಲಿ ಸತ್ತರೆ ಈ ಹಣ ಬಳಸಬಹುದು’ ರಾಹುಲ್ ಯಡವಟ್ಟು

ನವದೆಹಲಿ:  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ಸೇನೆಗೆ ಅವಮಾನ ಮಾಡುವುದರ ಜೊತೆ, ಅತ್ಯಂತ ಸಂವೇದನಾ ರಹಿತ ಹಾಗೂ ಅಮಾನವೀಯ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ರಾಹುಲ್​​ ಗಾಂಧಿ , ರಫೇಲ್​ ಡೀಲ್​ಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ಅನೇಕ ಆರೋಪಗಳನ್ನ ಮಾಡಿದ್ರು. ಈ ವೇಳೆ ಅವರು, ರಫೇಲ್​ ಡೀಲ್​ನ ಈ 30 ಸಾವಿರ ಕೋಟಿಯನ್ನ ನೀವು ವಿಮಾನ ದುರಂತದಲ್ಲಿ ಸತ್ತಾಗ ಕೊಡಲು ಬಳಸಬಹುದು ಎಂದು ಯೋಧರನ್ನುದ್ದೇಶಿಸಿ ಹೇಳಿದ್ರು.

ಈ ಹೇಳಿಕೆಯನ್ನ ಖಂಡಿಸಿರೋ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದೆ.  ಟ್ವಿಟರ್​ನಲ್ಲಿ ರಾಹುಲ್ ಗಾಂಧಿಯ ವಿಡಿಯೋ ಹಂಚಿಕೊಂಡಿರೋ ಬಿಜೆಪಿ, ಸುಳ್ಳುಗಾರ ರಾಹುಲ್ ಗಾಂಧಿ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ ಎಂದಿದೆ. ಅವರು ಕ್ಷಮೆ ಕೇಳಬೇಕು ಎಂದು ನಾವು ಬಯಸಿದ್ದೆವು. ಆದ್ರೆ ಈಗ ಸಹಾನುಭೂತಿ ತೋರಿಸುತ್ತಿದ್ದೇವೆ ಅಷ್ಟೇ. ನೈತಿಕವಾಗಿ ಉತ್ತಮವಾಗಿರುವ ಯಾವ ವ್ಯಕ್ತಿ ತಾನೆ ಇಂಥ ಅತಿರೇಕದ ಹೇಳಿಕೆ ನೀಡಲು ಸಾಧ್ಯ ಎಂದು ಹೇಳಿದೆ. ಅಲ್ಲದೇ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಸುಳ್ಳು, ಅವರೊಬ್ಬ ಸುಳ್ಳುಗಾರ ಎಂದಿರುವ ಬಿಜೆಪಿ, ಒಂದೊಂದಾಗಿ ಆರೋಪಗಳನ್ನ ಪಟ್ಟಿ ಮಾಡಿ, ಅದಕ್ಕೆ ಉತ್ತರ ನೀಡಿದೆ.

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv