ಪತ್ರಕರ್ತೆ ಗೌರಿ ಹತ್ಯೆಯಲ್ಲಿ ಬಿಜೆಪಿ ಪಾತ್ರವಿಲ್ಲ-ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಹತ್ಯೆಯಲ್ಲಿ ಬಿಜೆಪಿಯ ಪಾತ್ರವಿಲ್ಲ ಅಂತಾ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್​ ಶೆಟ್ಟರ್​​, ಗೌರಿ ಹತ್ಯೆ ಸಂಬಂಧ ಸಧ್ಯ ಎಸ್​​ಐಟಿ ಅಧಿಕಾರಿಗಳು ಕೆಲವರನ್ನ ಬಂಧಿಸಿದ್ದಾರೆ. ಆರೋಪಿಗಳನ್ನು ತನಿಖೆಗೊಳಪಡಿಸಬೇಕು. ತನಿಖೆಯ ಬಳಿಕವಷ್ಟೇ ತಪ್ಪಿತಸ್ಥರು ಯಾರೆಂದು ಗೊತ್ತಾಗುತ್ತೆ. ತಪ್ಪು ಯಾರೇ ಮಾಡಿದ್ರೂ, ಅವರಿಗೆ ಶಿಕ್ಷೆಯಾಗಲಿ ಅಂತಾ ಶೆಟ್ಟರ್ ತಿಳಿಸಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ನಾವೆಲ್ಲ ಒಂದಾಗೇ ಇದ್ದು, ಬೇರೆಯಾಗೋ ಮಾತು ಎಲ್ಲಿಂದ ಬರುತ್ತೆ. ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡಿದವರನ್ನ ಜನ ಮನೆಗೆ ಕಳಿಸಿದ್ದಾರೆ. ಸಧ್ಯ ಅವರ ಹತ್ತಿರ ಜನವೂ ಇಲ್ಲ ಅಧಿಕಾರವೂ ಇಲ್ಲ ಅಂತಾ ಲೇವಡಿ ಮಾಡಿದ್ರು.
ಪ್ರತ್ಯೇಕ ಧರ್ಮಕ್ಕಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಏಲೆಕ್ಷನ್ ಮೊದಲೇ ಕಾನೂನು ಹೋರಾಟ ಮಾಡಬೇಕಿತ್ತು. ಅದನ್ನು ಬಿಟ್ಟು ಱಲಿಯನ್ನೇಕೆ ಮಾಡಿದ್ರು ಅಂತಾ ಶೆಟ್ಟರ್ ಪ್ರಶ್ನಿಸಿದ್ರು. ಏಲೆಕ್ಷನ್​ನಲ್ಲಿ ಪ್ರತ್ಯೇಕ ಧರ್ಮ ಅಂತ ಇವರನ್ನು ಕೆಲವರು ಚೂ ಬಿಟ್ಟರು. ಇದನ್ನು ತಿಳಿದ ಜನ ಇವರನ್ನು ನಂಬಲಿಲ್ಲ ಎಂದು ಜಗದೀಶ್​ ಶೆಟ್ಟರ್​​ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv