ಬಿಜೆಪಿ-ಕಾಂಗ್ರೆಸ್ ಮಧ್ಯೆ ಮಾರಾಮಾರಿ

ಬೆಂಗಳೂರು: ಜಾಲಹಳ್ಳಿ ವಿಲೇಜ್ ಬಳಿ ವೋಟರ್ ಐಡಿಯನ್ನ ಪಡೆದುಕೊಂಡು ಹಣ ನೀಡ್ತಿದ್ರು ಎಂಬ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾರಾಮಾರಿ ನಡೆದಿದೆ. ಮನೆ ಮನೆಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಮಾಡ್ತಿದ್ರು. ಈ ವೇಳೆ ವೋಟರ್ ಐಡಿಯನ್ನ ಪಡೆದುಕೊಂಡು ಹಣ ನೀಡ್ತಿದ್ರು ಅಂತ ಆರೋಪಿಸಲಾಗಿದೆ. ಇದನ್ನ ನೋಡಿದ ಬಿಜೆಪಿಗರು ಗಲಾಟೆ ನಡಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರಂತೆ. ವಿಷಯ ತಿಳಿದು, ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿದ್ರು. ಈ ವೇಳೆ ವೋಟರ್ ಐಡಿ ಪಡೆದುಕೊಂಡು ಹಣ ನೀಡ್ತಿಲ್ಲ ಅಂತಾ ಕಾಂಗ್ರೆಸ್ ಕೂಡ ಪ್ರತಿಭಟನೆ ನಡೆಸಿದ್ರೆ, ಇತ್ತ ಹಣ ನೀಡ್ತಿದ್ರು ಅಂತಾ ಬಿಜೆಪಿ ಪ್ರತಿಭಟನೆ ನಡೆಸಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಳಿಗಾಗಿ ಸಂಪರ್ಕಿಸಿ: contact@firstnews.tv