ಬಿಜೆಪಿಗೆ ಕಾಂಗ್ರೆಸ್ ಬೆಂಬಲ, ಬಿಜೆಪಿ ಸದಸ್ಯೆಗೆ ಅಧ್ಯಕ್ಷೆ ಪಟ್ಟ..!

ರಾಮನಗರ:  ರಾಮನಗರ ಹೇಳಿ ಕೇಳಿ ಜೆಡಿಎಸ್‌ನ ಭದ್ರಕೋಟೆ. ಅಲ್ಲದೇ, ರಾಮನಗರ ಸಿಎಂ ಕುಮಾರಸ್ವಾಮಿ ಅವರ ಕ್ಷೇತ್ರ ಬೇರೇ. ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಆಶ್ಚರ್ಯ ಅಂದ್ರೆ,ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ಬಿಜೆಪಿ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡಿದೆ. ರಾಮನಗರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ 5ನೇ ವಾರ್ಡ್‌ನ ಬಿಜೆಪಿ ಸದಸ್ಯೆ ರತ್ನಮ್ಮ ಆಯ್ಕೆಯಾಗಿದ್ದಾರೆ. ಒಟ್ಟು 31 ಸದಸ್ಯರ ಬಲವಿರೋ ನಗರಸಭೆಯಲ್ಲಿ, ಬಿಜೆಪಿ ಸದಸ್ಯೆ ರತ್ನಮ್ಮ 19 ಮತಗಳನ್ನ ಪಡೆದರೆ, ಜೆಡಿಎಸ್‌ ಸದಸ್ಯೆ ಸುಜಾತಾಗೆ 11 ಮತಗಳು ಬಿದ್ದಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv