ಹಣಕೊಟ್ಟು ಬಿಜೆಪಿ ಅಭ್ಯರ್ಥಿಯನ್ನ ಖರೀದಿ ಮಾಡಲಾಗಿದೆ: ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ: ರಾಮನಗರ ಉಪಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್​ ಅವರು ಚುನಾವಣೆಯಿಂದ ಹಿಂದೆ ಸರಿದ ವಿಚಾರದ ಕುರಿತು ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಶಿರಾಳಕೊಪ್ಪದಲ್ಲಿ ಪ್ರತಿಕ್ರಿಯಿಸಿ ‘ಹಣಕೊಟ್ಟು ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರನ್ನ ಹಣಕೊಟ್ಟು ಖರೀದಿ ಮಾಡಲಾಗಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಡಿ.ಕೆ ಶಿವಕುಮಾರ್ ಮತ್ತು ಅವರ ತಮ್ಮ ಡಿ.ಕೆ.ಸುರೇಶ್ ಹಣದ ಬಲದಿಂದ  ಅಭ್ಯರ್ಥಿಯನ್ನ ವಾಪಸ್ ಪಡೆಸುವ ಪ್ರಯತ್ನ ಮಾಡಿದ್ದಾರೆ. ನಮಗೇನು ಚಿಂತೆ ಇಲ್ಲ.. ರಾಮನಗರದಲ್ಲಿ ನಮಗೆ ಶಕ್ತಿ ಇರಲಿಲ್ಲ. ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿಯವರ ಪತ್ನಿಯನ್ನ ಮೈತ್ರಿ ಅಭ್ಯರ್ಥಿಯಾಗಿ ನಿಲ್ಲಿಸಿರೋದ್ರಿಂದ  ಮೈತ್ರಿ ಪಕ್ಷದವರು ತಂತ್ರಗಾರಿಕೆ, ಕುತಂತ್ರ ಮಾಡಿದ್ದಾರೆ ಎಂದ ಯಡಿಯೂರಪ್ಪ ಕಿಡಿಕಾರಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv