‘ರಾಹುಲ್ ವರ್ಚಸ್ಸಿನಿಂದ ಗೆಲ್ಲುತ್ತೇನೆ ಎಂದು ಕುಲಕರ್ಣಿ ಹೇಳಲಿ, ನೋಡೋಣ’

ಹುಬ್ಬಳ್ಳಿ: ವಿನಯ ಕುಲಕರ್ಣಿ ಅವರಿಗೆ ಏನು ವರ್ಚಸ್ಸು ಇದೆಯೋ ಅದು ಅವರಿಗೇ ಇರಲಿ. ಅದು ನನಗೆ ಬೇಡ, ಅದು ಅವರಿಗೇ ಸೂಕ್ತವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಮೈತ್ರಿ ಅಭ್ಯರ್ಥಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಪ್ರಹ್ಲಾದ ಜೋಶಿ, ನಮ್ಮ ಪಕ್ಷದ ಅಟಲ್ ಜೀ ಹಾಗೂ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸೌಜನ್ಯಯುತ ರಾಜಕಾರಣ ವರ್ಚಸ್ಸು ನನಗೆ ಇರಲಿ. ಉಳಿದಂತೆ ಎಲ್ಲ ವರ್ಚಸ್ಸು ಅವರಿಗೇ ಇರಲಿ. ಅದರ ಬಗ್ಗೆ ನನಗೆ ಅಭ್ಯಂತರವಿಲ್ಲ, ಅದನ್ನೇ ಅವರು ಮುಂದುವರೆಸಲಿ. ನಮ್ಮ ನಾಯಕರ ಬೆಂಬಲದಲ್ಲಿ ಗೆದ್ದಿರುವುದಕ್ಕೆ ನನಗೇನೂ ಸಂಕೋಚವಿಲ್ಲ. ಪಕ್ಷದ ಒಬ್ಬ ಕಾರ್ಯಕರ್ತನಾಗಿ ನಾನು ಗೆದ್ದಿದ್ದೇನೆ. ಅವರು ಬೇಕಾದರೆ ರಾಹುಲ್ ಗಾಂಧಿ ವರ್ಚಸ್ಸಿನಿಂದ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ಹೇಳಲಿ, ನೊಡೋಣ. ಅದಕ್ಕೆ ಯಾವುದೇ ತಕರಾರು ಇಲ್ಲ. ಆರು ಪಟ್ಟು ತಮ್ಮ ಆಸ್ತಿಗಳನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ ಎಂಬುವುದು ಜನಕ್ಕೆ ಗೊತ್ತಿದೆ. ಅವರು ಏನು ಕೆಲಸ ಮಾಡಿದ್ದಾರೆ, ನಾ ಏನು ಕೆಲಸ ಮಾಡಿದ್ದೇನೆ ಎಂಬ ರಿಪೋರ್ಟ್ ಕಾರ್ಡ್ ಜನರ ಕೈಯಲ್ಲಿ ಇದೆ. 60 ವರ್ಷದಲ್ಲಿ ಅಧಿಕಾರದಲ್ಲಿ ಇದ್ದುಕೊಂಡು ಈಗ ಐಐಟಿ‌ ನಾವು ತಂದ್ದಿದ್ದೇವೆ ಅಂತಾರೆ. ಐಐಟಿ ತರುವುದಕ್ಕೆ 60 ವರ್ಷ ಬೇಕಾಯಿತಾ? ಅವರ ಭಂಡ ವಾದಕ್ಕೆ ನಾವೇನೂ ಹೇಳುವುದು? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವಳಿ ನಗರಕ್ಕೆ ಐಐಟಿ ತಂದಿದ್ದೇವೆ. ಕಾಂಗ್ರೆಸಿಗರ ಪರಿಸ್ಥಿತಿ ನೋಡಿದರೆ ಅನುಕಂಪ ಬರುತ್ತೆ. ಅವರಿಗೆ ಹೇಳುವುದಕ್ಕೆ ಬೇರೆ ಏನೂ ಸಿಗುತ್ತಿಲ್ಲ. ರಾಜ್ಯದಲ್ಲಿ ಚುನಾವಣೆಯನ್ನು ನಮ್ಮ ರಾಜ್ಯ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡಿದ ಪ್ರಹ್ಲಾದ ಜೋಶಿ, ಕೋರ್ಟ್ ಹೊರಗಡೆ ಇತ್ಯರ್ಥಕ್ಕೆ ನಾವು ಪ್ರಯತ್ನ ಮಾಡಲಾಗುತ್ತಿತ್ತು.
ಆದರೆ, ಕಾಂಗ್ರೆಸ್ ಪಕ್ಷದವರು ಕಪಿಲ್ ಸಿಬಲ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಹಾಕಿಸಿದ್ದರು. 2019ರ ನಂತರ ಪ್ರಕರಣ ವಿಚಾರಣೆ ಮಾಡಬೇಕು ಎಂದು ಅರ್ಜಿ ಹಾಕಿಸಲಾಗಿತ್ತು. ಆದರೆ ಈಗ ನ್ಯಾಯಾಲಯದ ಒಂದು‌ ಕಮಿಟಿ ಮಾಡಿದೆ. ಅದಕ್ಕೆ ವೇಟ್ ಮಾಡಿ‌ ನೋಡೋಣ. ರಾಮ ಜನ್ಮ ಸ್ಥಳದಲ್ಲಿ ವಿಗ್ರಹ ದೊರೆತ ಜಾಗದಲ್ಲಿ ಮಂದಿರ ನಿರ್ಮಾಣ ಆಗಬೇಕು. ಇದು ನಮ್ಮ  ಪಕ್ಷದ ನಿಲುವಾಗಿದೆ ಎಂದು  ಅವರು ಪ್ರತಿಕ್ರಿಯಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv