ಸೋಲಿನ ಭಯ ಇರೋರು ಏನೇನೋ ಮಾಡ್ತಾರೆ: ಸೌಮ್ಯ ರೆಡ್ಡಿಗೆ ಪ್ರಹ್ಲಾದ್ ಟಾಂಗ್​​

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇಂದು ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.

 ಪ್ರಹ್ಲಾದ್ ಬಾಬು ಅವರು ಮಾಜಿ ಬಿಜೆಪಿ ಶಾಸಕ, ದಿವಂಗತ ಬಿ.ಎನ್.ವಿಜಯಕುಮಾರ ಸಹೋದರ. ರಾಣಿಚನ್ನಮ್ಮ ಮತಗಟ್ಟೆಯಲ್ಲಿ ಮತದಾನ ಮಾಡಿದ ಪ್ರಹ್ಲಾದ್ ಬಾಬು, ಮತದಾನದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಎಲ್ಲಾ ಕಾರ್ಪೊರೇಟರ್​ಗಳ ಬೆಂಬಲ ನನಗೆ ಇದೆ. ಸುಮಾರು ದಿನಗಳಿಂದ ಎಲ್ಲರೂ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಸುಮಾರು ಹತ್ತು ದಿನಗಳಿಂದ ನನ್ನ ಪರವಾಗಿ ನಿರಂತರ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.
ಇನ್ನು ಜೆಡಿಎಸ್​ನ ಕಾಂಗ್ರೆಸ್ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಯಾರಿಗೆ ಸೋಲಿನ ಭಯ ಇರುತ್ತೋ ಅವರು ಏನೇನೋ ಮಾಡ್ತಾರೆ. ನಮಗೆ ಯಾವುದೇ ಭಯವಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯ ರೆಡ್ಡಿಗೆ ಟಾಂಗ್​ ಕೊಟ್ರು. ನನ್ನ ಅಣ್ಣನ ಆಶೀರ್ವಾದ, ಜನತೆಯ ಆಶೀರ್ವಾದ ನನ್ನ ಮೇಲಿದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್​ ನಿಧನದಿಂದ ಜಯನಗರ ವಿಧಾನಸಭಾ ಚುನಾವಣೆ ಮುಂದೂಡಲ್ಪಟ್ಟಿತ್ತು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv