‘ತಂದೆ ಲಿಂಗಪ್ಪ 3 ಬಾರಿ ಶಾಸಕರಾಗಿದ್ರು, ಕೆಲ್ಸ ಮಾಡಿದ್ದಾರೆ.. ಅದೇ ನನಗೆ ಶ್ರೀರಕ್ಷೆ‘

ರಾಮನಗರ: ಅನಿತಾ ಕುಮಾರಸ್ವಾಮಿ ಅವ್ರಿಗೆ ಕ್ಷೇತ್ರದ ಜನರ ಪರಿಚಯವೇ ಇಲ್ಲ. ಪ್ರಚಾರದ ವೇಳೆ ಅವರಿಗೆ ಜನರೇ ಛೀಮಾರಿ ಹಾಕ್ತಿದಾರೆ. ಜನ ಈ ಬಾರಿ ನನ್ನನ್ನ ಗೆಲ್ಲಿಸುವುದು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹೇಳಿದ್ದಾರೆ.

ರಾಮನಗರದಲ್ಲಿ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ಅವರು, ನಮ್ಮ ತಂದೆ ಲಿಂಗಪ್ಪ ಮೂರು ಬಾರಿ ಇಲ್ಲಿ ಶಾಸಕರಾಗಿ ತುಂಬಾ ಕೆಲಸ ಮಾಡಿದ್ದಾರೆ. ನನ್ನ ಗೆಲುವಿಗೆ ಅದು ಶ್ರೀರಕ್ಷೆಯಾಗಲಿದೆ. ಇಡೀ ಕ್ಷೇತ್ರದ ಜನರ ನಾಡಿಮಿಡಿತ ಗೊತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ನಾನಿಲ್ಲಿ ಸ್ಥಳೀಯ ಅಭ್ಯರ್ಥಿ. ಸಿಎಂ ಕುಮಾರಸ್ವಾಮಿ ಶಾಸಕರಾಗಿದ್ದಾಗ ಯಾವ ಗ್ರಾಮಗಳಿಗೂ ಭೇಟಿ ನೀಡಿಲ್ಲಾ ಎಂದು ಆರೋಪಿಸಿದರು.

ಕಾಂಗ್ರೆಸ್- ಜೆಡಿಎಸ್ ಈಗ ಒಂದಾಗಿರಬಹುದು. ಆದರೆ, ಆಂತರಿಕವಾಗಿ ಅಸಮಾಧಾನ ಇದೆ. ಮೇಲ್ನೋಟಕ್ಕೆ ಒಂದಾಗಿದ್ದರೂ ತಿಕ್ಕಾಟ ನಡೆಯುತ್ತಲೇ ಇದೆ. ಎರಡೂ ಪಕ್ಷಗಳ ಅಸಮಾಧಾನದ ಮತಗಳು ನನಗೆ ಬರುತ್ತೆ. ಆ ಪಕ್ಷಗಳ ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ನಾಯಕರು ತಂದೆ-ಮಗನನ್ನ ಬೇರೆ ಮಾಡಲು ಷಡ್ಯಂತ್ರ ನಡೆಸಿದ್ದಾರೆ. ನನ್ನ ಪರವಾಗಿ ಕೆಲಸ ಮಾಡಬಹುದೆಂಬ ಆತಂಕ ಕಾಂಗ್ರೆಸ್ ನಾಯಕರದ್ದು. ಇದೇ ಕಾರಣಕ್ಕೆ ನಮ್ಮ ತಂದೆ ಲಿಂಗಪ್ಪರಿಗೆ ಬಳ್ಳಾರಿ ಉಸ್ತುವಾರಿ ಕೊಟ್ಟಿದ್ದಾರೆ. ಆದರೂ ನಮ್ಮ ತಂದೆಯವರ ಆಶೀರ್ವಾದ ಇದ್ದೇ ಇರುತ್ತೆ. ಪಕ್ಷದ ಎಲ್ಲಾ ನಾಯಕರು ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ 22 ವರ್ಷ ಕೆಲಸ ಮಾಡಿದ್ದೇನೆ. ಆದರೂ ನನ್ನನ್ನ ತುಳಿಯಲು ಪ್ರಯತ್ನಿಸಿದ್ರು ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv