ಅಶೋಕ್‌ ಖೇಣಿ ಎದುರು ಮೋದಿ ಚೌಕಿದಾರ್ ಎಂದ ಬಿಜೆಪಿ ಕಾರ್ಯಕರ್ತರು

ಬೀದರ್: ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಪ್ರಚಾರದಲ್ಲಿ ತೊಡಗಿದ್ದಾಗ ಅದೇ ಮಾರ್ಗ ಮಧ್ಯದಲ್ಲಿ ಬಂದ ಅಶೋಕ್‌ ಖೇಣಿ ಎದುರು ಬಿಜೆಪಿ ಕಾರ್ಯಕರ್ತರು ಮೋದಿ ಚೌಕಿದಾರ್ ಎಂದು ಘೋಷಣೆ ಕೂಗಿದ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದಿದೆ. ಇಂದು ಸಂಜೆ ನಿರ್ಣಾ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಪ್ರಚಾರದಲ್ಲಿ ತೊಡಗಿದ್ದಾಗ ಪಕ್ಕದ ಮುತ್ತಂಗಿ ಗ್ರಾಮಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನೈಸ್ ರೋಡ್​​​ ಖ್ಯಾತಿಯ ಅಶೋಕ್‌ ಖೇಣಿ ಅವರ ಮುಂದೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗಿದರು. ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಅನ್ನುತ್ತಿದ್ದಂತೆ ನಗು ಮುಖದಿಂದಲೆ ಖೇಣಿ ಅಲ್ಲಿಂದ ಕಾಲು‌ ಕಿತ್ತಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv