ಹಿರೆಕೆರೂರು ಬಿಜೆಪಿ ಅಭ್ಯರ್ಥಿ ಆಸ್ತಿ 1 ಕೋಟಿ 83 ಲಕ್ಷ

ಹಾವೇರಿ: ಹಿರೆಕೆರೂರು ಬಿಜೆಪಿ ಅಭ್ಯರ್ಥಿ ಯು.ಬಿ ಬಣಕಾರ್ ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ. ತಮ್ಮ ಹೆಸರಲ್ಲಿ 1.28 ಕೋಟಿ ಮೌಲ್ಯದ ಚರಾಸ್ತಿ ಹಾಗೂ 55.61ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ತಮ್ಮ ಪತ್ನಿ ಅನ್ನಪೂರ್ಣ ಬಣಕಾರ್ ಹೆಸರಲ್ಲಿ 42.94ಲಕ್ಷ ಚರಾಸ್ತಿ ಇದ್ದು, ತಮ್ಮ ಪುತ್ರ ಶರತಚಂದ್ರ ಬಣಕಾರ ಹೆಸರಲ್ಲಿ 37.41ಲಕ್ಷದ ಚರಾಸ್ತಿ ಹಾಗೂ 3.36ಲಕ್ಷದ ಸ್ಥಿರಾಸ್ತಿ ಇದೆ ಅಂತ ಅಫಿಡವಿಟ್ ಸಲ್ಲಿಸಿದ್ದಾರೆ. ಸ್ವಗ್ರಾಮ ಚಿಕ್ಕೊಣತಿಯಲ್ಲಿ ಪಿತ್ರಾರ್ಜಿತ 22 ಎಕರೆ ಕೃಷಿ ಭೂಮಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮಂಜೂರಾದ 360 ಚ.ಮೀ ಸೈಟ್ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಹಿರೆಕೆರೂರಿನಲ್ಲಿ 2,382 ಚ.ಮೀ ನಿವೇಶನ, ರಾಣೆಬೆನ್ನೂರಿನಲ್ಲಿ 2400 ಚ‌.ಮೀ ನಿವೇಶನ ಸೇರಿದಂತೆ ತಮ್ಮ ಪತ್ರನ ಹೆಸರಲ್ಲಿ 108 ಚ.ಮೀ ನಿವೇಶನ ಇದೆ ಎಂದಿದ್ದಾರೆ. ಇದಲ್ಲದೆ 6.63.076 ಮೌಲ್ಯದ ಬೊಲೆರೋ ವಾಹನ ಹಾಗೂ 18 ಲಕ್ಷ ಮೌಲ್ಯದ ಇನ್ನೊವಾ ಕಾರು, 3kg ಬೆಳ್ಳಿ, 1100 ಗ್ರಾಂ ಬಂಗಾರ ಇರೋದಾಗಿ ಘೋಷಿಸಿಕೊಂಡಿದ್ದಾರೆ. ಇದಲ್ಲದೆ ತಮ್ಮ ಹೆಸರಲ್ಲಿ ಯೂನಿಯನ್ ಬ್ಯಾಂಕ್‌ನಲ್ಲಿ 3ಲಕ್ಷ ಸಾಲ ಇರೋದಾಗಿಯೂ ಘೋಷಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *