ಜೆಡಿಎಸ್ ವಿಜಯೋತ್ಸವ ವೇಳೆ ಸ್ಫೋಟ, ಬಿಜೆಪಿಯಿಂದ ಬಂದ್..!

ಹಾಸನ: ನಿನ್ನೆ ಜೆಡಿಎಸ್ ಅಭ್ಯರ್ಥಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಸ್ಫೋಟವನ್ನ ಬಿಜೆಪಿ ನಡೆಸಿದ್ದು ಅಂತ ಜೆಡಿಎಸ್ ಆರೋಪಿಸಿತ್ತು. ಇದನ್ನ ಖಂಡಿಸಿ ಇಂದು ಬಿಜೆಪಿ ಕಾರ್ಯಕರ್ತರು ಹಾಸನ, ಸಕಲೇಶಪುರ, ಬಾಳ್ಳುಪೇಟೆ ಬಂದ್​​ ಆಚರಿಸುತ್ತಿದ್ದಾರೆ.
ನಿನ್ನೆ ಚುನಾವಣೆಯಲ್ಲಿ ಜಯಗಳಿಸಿದ್ದ ಜೆಡಿಎಸ್​ನ ಹೆಚ್​.ಕೆ. ಕುಮಾರಸ್ವಾಮಿ ವಿಜಯೋತ್ಸವ ಆಚರಿಸಿದ್ರು. ಈ ವೇಳೆ ಕಿಡಿಗೇಡಿಗಳು ಸ್ಫೋಟಕಗಳನ್ನ ಎಸೆದಿದ್ದರು. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದವು. ಈ ಕೃತ್ಯವನ್ನ ಬಿಜೆಪಿಯವರೇ ನಡೆಸಿದ್ದಾರೆ ಅಂತ ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದರು. ಸ್ಫೋಟದ ವೇಳೆ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಹೆಚ್.ಕೆ. ಕುಮಾರಸ್ವಾಮಿ ಅಪಾಯದಿಂದ ಪಾರಾಗಿದ್ರು. ಬಳಿಕ ಅವರನ್ನ ಬಿಗಿ ಭದ್ರತೆ ಜೊತೆ ಸ್ಥಳದಿಂದ ಕಳಿಸಲಾಗಿತ್ತು. ಅಲ್ಲದೆ, ಕೃತ್ಯವೆಸಗಿ ವ್ಯಕ್ತಿಯನ್ನ ಹಿಡಿದು ಪೊಲೀಸರಿಗೂ ಒಪ್ಪಿಸಲಾಗಿತ್ತು.
ನಿನ್ನೆ ನಡೆದ ಸ್ಫೋಟದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಇನೋವಾ ಕಾರು, ಅಂಗಡಿಗಳ ಗಾಜು ಪುಡಿಪುಡಿಯಾಗಿತ್ತು.