‘ನಮ್ಮ ಕಾರ್ಯಕರ್ತನಿಗೆ ಏನಾದ್ರೂ ಆದ್ರೆ ಅಲ್ಲೋಲಕಲ್ಲೋಲವಾಗುತ್ತೆ’

ಬೆಂಗಳೂರು: ಮೂರ್ನಾಲ್ಕು ಜನ ದುಷ್ಕರ್ಮಿಗಳು ಸೇರಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ಜಯನಗರದ ಶಾಕಂಬರಿ ನಗರ ವಾರ್ಡ್ ಕಾರ್ಯಕರ್ತ ಧೀರಜ್ ಮೇಲೆ ಚುನಾವಣೆ ವೈಷಮ್ಯ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದೆ.

ಯಾರಿಗೂ ತಿಳಿಯದಂತೆ ಧೀರಜ್ ಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರಾದ ಸಂತೋಷ್ ಹಾಗೂ ಸತೀಶ್ ಹಿಂಬಾಲಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಧೀರಜ್ ಪರಿಸ್ಥಿತಿ ಗಂಭೀರವಾಗಿದೆ. ಧೀರಜ್​ಗೆ ಕೊಂಚ ತೊಂದರೆ ಆದರೂ ನಗರವೇ ಅಲ್ಲೋಲ, ಕಲ್ಲೋಲವಾಗುತ್ತೆ ಎಂದು ಬಿಜೆಪಿ ಕಾರ್ಯಕರ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv