ಬರ್ತ್​​​ಡೇ ವಾಗ್ವಾದ, ಮಾರಾಮಾರಿ: ಓರ್ವನಿಗೆ ಗಂಭೀರ ಗಾಯ

ಹುಬ್ಬಳ್ಳಿ: ಹಾಡಹಗಲೇ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ‌‌ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಆನಂದ ನಗರದಲ್ಲಿ ನಡೆದಿದೆ.‌
ಆನಂದ ನಗರದ ಸರ್ಕಾರಿ ಶಾಲೆಯಲ್ಲಿ ಬಾಬಾಜಾನ್ ಜಿಲಾನಿ ಎಂಬುವವರು ಎರಡು ದಿನಗಳ ಹಿಂದೆ ತಮ್ಮ ಸ್ನೇಹಿತನ ಮಗನ ಬರ್ತ್​​​ಡೇ ಕಾರ್ಯಕ್ರಮ ಆಚರಿಸಿದ್ದರು.‌ ನಮ್ಮನು ಕೇಳದೇ ಹೇಗೆ ಬರ್ತ್​​​ಡೇ ಕಾರ್ಯಕ್ರಮವನ್ನು ಶಾಲೆಯಲ್ಲಿ ನಡೆಸಿದ್ದೀರಿ ಎಂದು ಮೊಹಮದ್​ ರಫೀಕ್​ ಮೇಲ್ಮೂರಿ ಎಂಬುವವರ ಗುಂಪು ತಗಾದೆ ತಗೆದಿದೆ. ಹೀಗೆ ಮಾತಿಗೆ ಮಾತು ನಡೆದು ಎರಡು ಗುಂಪುಗಳು ಹೊಡೆದಾಡಿಕೊಂಡಿವೆ ಎನ್ನಲಾಗಿದೆ.
ಘಟನೆಯಲ್ಲಿ ಮೊಹಮದ್​ ರಫೀಕ್ ಮೇಲ್ಮೂರಿಯ ಗುಂಪು, ಬಾಬಾಜಾನ್ ಜಿಲಾನಿ ಮೇಲೆ ಕಲ್ಲು ಹಾಗೂ ಬಡಿಗೆಯಿಂದ ಹಲ್ಲೆ ನಡೆಸಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv