ಆಯುಷ್ಯಮಾನ್​ ಭಾರತ ಯೋಜನೆ ಸಕ್ಸೆಸ್, ಮೋದಿ ಸರ್ಕಾರಕ್ಕೆ ಬಿಲ್​ ಗೇಟ್ಸ್​ ಮೆಚ್ಚುಗೆ..!

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ  ಬಡಜನರಿಗಾಗಿ ಆಯುಷ್​ಮಾನ್​  ಭಾರತ ಎಂಬ ಆರೋಗ್ಯ ಯೋಜನೆಯನ್ನು (ಆಯುಷ್​ಮಾನ್​ – ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಎಬಿ-ಎನ್ಎಚ್ ಪಿಎಂ) ಜಾರಿಗೆ ತಂದು 100 ದಿನಗಳಾಗಿವೆ. ಯೋಜನೆ ಭಾರಿ ಯಶಸ್ಸು ಕಂಡಿದೆ. ಈ ನೂರು ದಿನದಲ್ಲಿ ಕೋಟ್ಯಂತರ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಈ ಯೋಜನೆಯ ಬಗ್ಗೆ ಸಮಾಜ ಸೇವಾ ಕಾರ್ಯಕರ್ತರಾಗಿ ರೂಪಾಂತರಗೊಂಡಿರುವ ಮೈಕ್ರೋಸಾಫ್ಟ್​​  ಸಂಸ್ಥಾಪಕ ಬಿಲ್​ ಗೇಟ್ಸ್​ ಅವ್ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೋಜನೆಯನ್ನು ಯಶಸ್ವಿಯಾಗಿ  ಅನುಷ್ಠಾನಗೊಳಿಸಿರುವುದಕ್ಕೆ ಭಾರತ ಸರ್ಕಾರವನ್ನು ಅಭಿನಂದಿಸಲು ಇಚ್ಛಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.