ಬೈಕ್​ ವ್ಹೀಲಿಂಗ್​ ಪ್ರಶ್ನಿಸಿದ ವ್ಯಕ್ತಿ ಮೇಲೆಯೇ ಅಟ್ಯಾಕ್

ಕೋಲಾರ: ವ್ಹೀಲಿಂಗ್ ಮಾಡುತ್ತಿದ್ದಿದ್ದನ್ನು ಪ್ರಶ್ನಿಸಿದ್ದಕ್ಕಾಗಿ, ವ್ಯಕ್ತಿಯ ಮೇಲೆ ಯುವಕರು ಮನಬಂದಂತೆ ಹಲ್ಲೆ ಮಾಡಿದ ಘಟನೆ ನಗರದ ಡೂಂ ಲೈಟ್ ಸರ್ಕಲ್ ಬಳಿ ನಡೆದಿದೆ. ನಗರದ ಕಠಾರಿಪಾಳ್ಯದ ನಿವಾಸಿ ಪವನ್ ಹಲ್ಲೆಗೊಳಗಾದ ಯುವಕ. ಮೂವರು ಯುವಕರ ತಂಡ ಬೈಕ್​ನಲ್ಲಿ ವ್ಹೀಲಿಂಗ್ ಮಾಡುವ ವೇಳೆ ಪವನ್ ಎಂಬುವವರ​ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಪವನ್​ ಬೈಕ್​ನಿಂದ ಕೆಳಗೆ ಬಿದ್ದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಪುಂಡರು ಪವನ್​ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇನ್ನು ಹಲ್ಲೆಯಿಂದ ಪವನ್​ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕೋಲಾರ‌ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv