ನ್ಯಾಷನಲ್ ಹೈವೇನಲ್ಲಿ ಬೈಕ್ ವ್ಹೀಲಿಂಗ್ ಮಾಡ್ತಿದ್ರು..ಆಮೇಲೇನಾಯ್ತು ಗೊತ್ತಾ..?

ನೆಲಮಂಗಲ: ಬೈಕ್​ ವ್ಹೀಲಿಂಗ್​ ಮಾಡುತ್ತಿದ್ದ ವೇಳೆ ಮುಂದೆ ತೆರಳುತ್ತಿದ್ದ ವ್ಯಕ್ತಿಗೆ ಗುದ್ದಿದ ಯುವಕರಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ನಡೆದಿದೆ. ರಾಮಯ್ಯ ಎನ್ನುವವರು ರಾಷ್ಟ್ರೀಯ ಹೆದ್ದಾರಿ 4ರ ದೇವಣ್ಣನ ಪಾಳ್ಯ ಬಳಿ ಸಂಜೆ 5 ಗಂಟೆ ವೇಳೆ ತಮ್ಮ ಬೈಕ್​ನಲ್ಲಿ ತೆರಳುತ್ತಿದ್ದರು.

ಈ ವೇಳೆ ಯುವಕರಿಬ್ಬರು ತಮ್ಮ ಆರ್ ಎಕ್ಸ್ ಯಮಹಾ ಬೈಕ್​ನಲ್ಲಿ ನೆಲಮಂಗಲದಿಂದ ಜಾಲಹಳ್ಳಿ ಕಡೆಗೆ ಹೋಗ್ತಿದ್ದರು. ಆದ್ರೆ, ಯವಹಾ ಬೈಕ್​ನಲ್ಲಿದ್ದ ಸುಹೇಲ್ ಮತ್ತು ಆರೀಫ್, ಸುಮ್ಮನೆ ಹೋಗದೆ, ಬೈಕ್ ವ್ಹೀಲಿಂಗ್ ಮಾಡ್ತಾ ಹೋಗಿದ್ದಾರೆ. ಈ ವೇಳೆ ಅವರ ಮುಂದಿನ ಬೈಕ್​ನಲ್ಲಿ ಹೋಗ್ತಿದ್ದ ರಾಮಯ್ಯಗೆ ಗುದ್ದಿದ್ದಾರೆ.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಯುವಕರಿಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಮುಖ ಮೂತಿ ನೋಡದೆ ಗೂಸಾ ಕೊಟ್ಟಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *