ಬೈಕ್ ತಡೆದು ದರೋಡೆ ಮಾಡಿದ್ದ ಖದೀಮರ ಬಂಧನ

ರಾಯಚೂರು: ಬೈಕ್ ತಡೆದು ದರೋಡೆ ಮಾಡುತ್ತಿದ್ದ ನಾಲ್ಕು ಖದೀಮರನ್ನು ಮಸ್ಕಿ ಪೊಲೀಸರು ಬಂಧಿಸಿದ್ದಾರೆ. ಸಾಬೀರ್ ಬೇಗ್ 19, ಜಾವೇದ್ ಷಾ 21, ತಾಜುದ್ದಿನ್ 21 ಹಾಗೂ ಸಿಕಂದರ್ 19 ಬಂಧಿತರು. ಬಂಧಿತರು ಮುದಗಲ್ ಪಟ್ಟಣದ ನಿವಾಸಿಗಳು ಎಂದು ತಿಳಿದುಬಂದಿದೆ. ಕಳೆದ ಮೇ 21 ರಂದು ಮಲ್ಲಯ್ಯ ಸುರಪುರ ಎನ್ನುವವರ ಬೈಕ್ ತಡೆದು ₹ 2 ಲಕ್ಷ 50 ಸಾವಿರ ಹಣವನ್ನು ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಸ್ಕಿ ಪೊಲೀಸರು, ಎಸ್ ಪಿ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv