ಕಲಮಂಗಿಯಲ್ಲಿ ಬೈಕ್​-ಟ್ಯಾಂಕರ್​ ಡಿಕ್ಕಿ ತಂದೆ-ಮಗನ ದಾರುಣ ಸಾವು

ರಾಯಚೂರು: ನೀರಿನ ಟ್ಯಾಂಕರ್ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಬೈಕ್​ನಲ್ಲಿದ್ದ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದ ಸಿಂಧನೂರು- ಕುಷ್ಟಗಿ ರಸ್ತೆಯಲ್ಲಿ ನಡೆದಿದೆ. ರಾಂಪೂರ ಹೊಸಹಳ್ಳಿ ನಿವಾಸಿಗಳಾದ ಚಂದ್ರಪ್ಪ (42 ) ಮತ್ತು ಅವರ ಮಗ ಗಣೇಶ್(12) ಮೃತ ದುರ್ದೈವಿಗಳು. ಮಗನನ್ನು ಕುಷ್ಟಗಿಯ ಶಾಲೆಯೊಂದಕ್ಕೆ ಅಡ್ಮೀಶನ್ ಮಾಡಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ತುರವೀಹಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv