ವಿಜಯ ದಶಮಿ ಅಂಗವಾಗಿ ಬೈಕ್​ ಱಲಿ

ದಾವಣಗೆರೆ: ನಗರದಲ್ಲಿ ವಿಜಯ ದಶಮಿ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಬೈಕ್​ ಱಲಿ ಆಯೋಜಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್​ನಿಂದ ಆಯೋಜಿಸಿದ್ದ ಬೈಕ್​ ಱಲಿಯಲ್ಲಿ ನೂರಾರು ಮಹಿಳೆ ಭಾಗಿಯಾಗಿದ್ದರು. ನಗರದ ರಾಮ್ ಆ್ಯಂಡ್ ಕೋ ಸರ್ಕಲ್​ನಿಂದ ಹೊರಟ ಬೈಕ್ ಱಲಿ   ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಹಿಳೆಯರೆಲ್ಲ ಕೇಸರಿ ಪೇಟ ಧರಿಸಿ ಱಲಿ ನಡೆಸಿದ್ದು, ವಿಶೇಷವಾಗಿತ್ತು. ಬೈಕ್ ಱಲಿಗೆ ನಗರ ಠಾಣೆ ಪೊಲೀಸ್​ ಅಧಿಕಾರಿ ನಾಗಮ್ಮ ಚಾಲನೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv