ಆಟೋಗೆ ಬೈಕ್​ ಡಿಕ್ಕಿ: ಸವಾರ ಸಾವು

ಕೊಪ್ಪಳ: ಬೈಕ್​​ವೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ. ಅಸ್ಲಾಂ ಅಲಿ(21) ಮೃತ ದುರ್ದೈವಿ. ಗಿಣಿಗೇರ ಬಳಿರುವ ಕಿರ್​​​​​ಲೋಸ್ಕರ್​​​​ ಕಂಪನಿ ಬಳಿ ಬೈಕ್​ವೊಂದು ಓವರ್ಟೇಕ್ ಮಾಡಲು ಹೋಗಿ ಆಟೋಗೆ ಡಿಕ್ಕಿ ಹೊಡೆದಿದೆ. ದುರ್ಘಟನೆಯಲ್ಲಿ ಪಕ್ಕದಲ್ಲಿದ್ದ ಲಾರಿ ಗಾಲಿಗೆ ಸಿಲುಕಿ ಬೈಕ್​ ಸವಾರ ಅಸ್ಲಾಂ ಮೃತಪಟ್ಟಿದ್ದಾರೆ. ಈ ಸಂಬಂಧ ಮುನಿರಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.