ಅಪರಿಚಿತ ವಾಹನ ಡಿಕ್ಕಿ, ಓರ್ವ ಗಂಭೀರ ಗಾಯ

ರಾಯಚೂರು: ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಲಿಂಗಸುಗೂರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಬೈಕ್ ಸವಾರ ಮೀಟಪ್ಪ(55)ಗೆ ಗಂಭೀರ ಗಾಯ.

ಜಂಗಿರಾಂಪುರ ತಾಂಡಾ ನಿವಾಸಿ ಮೀಟಪ್ಪ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ನಿಂತಿದ್ದ. ಅಪರಿಚಿತ ವಾಹನ ಮೀಟಪ್ಪನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೀಟಪ್ಪ ಗಾಯಗೊಂಡಿದ್ದಾನೆ. ಗಂಭೀರ ಗಾಯಗೋಂಡಿರುವ ಮೀಟಪ್ಪನನ್ನು ಬಾಗಲಕೋಟೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv