ವಿದ್ಯುತ್​ ಕಂಬಕ್ಕೆ ಬೈಕ್‌ ಡಿಕ್ಕಿ ; ಬೈಕ್​ ಸವಾರ ಸಾವು

ಚಿತ್ರದುರ್ಗ: ಅತಿ ವೇಗವಾಗಿ ಬಂದ ಬೈಕ್‌ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಬಳಿ ನಡೆದಿದೆ. ಮಂಜುನಾಥ್ ಎಂಬ ಯುವಕ ಚಳ್ಳಕೆರೆಯಿಂದ ತಮ್ಮ ಸ್ವಗ್ರಾಮ ಪೆತಮರಹಟ್ಟಿಗೆ ಹೊರಟಿದ್ದ, ಅತಿ ವೇಗದಿಂದ ಬೈಕ್ ಚಲಾಯಿಸುತ್ತಿದ್ದ ಕಾರಣ ಬೈಕ್​ ನಿಯಂತ್ರಣ ತಪ್ಪಿ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜನಾಥ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.