ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ, ಮಹಿಳೆ ಸಾವು

ತುಮಕೂರು: ಬೈಕ್​​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರಿನ ರಾಜ್ಯ ಹೆದ್ದಾರಿ 4ರ ಶ್ರೀರಾಜ್ ಥಿಯೇಟರ್ ಬಳಿ ನಡೆದಿದೆ. ಮೃತ ಮಹಿಳೆ ಕ್ಯಾತ್ಸಂದ್ರ ನಿವಾಸಿ ಎಂದು ತಿಳಿದು ಬಂದಿದೆ. ನಗರದಿಂದ‌ ಕ್ಯಾತ್ಸಂದ್ರದ ನಿವಾಸಕ್ಕೆ ತೆರಳುವಾಗ ಈ ದುರಂತ ನಡೆದಿದೆ. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.