ಕಾರು, ಬೈಕ್ ನಡುವೆ ಅಪಘಾತ: ಬಿಜೆಪಿ ಮುಖಂಡ ಸಾವು

ಉಡುಪಿ : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಂದಾಪುರದ ಅಂಪಾರು ಸಮೀಪ ನಡೆದಿದೆ. ಬೇಳೂರು ಗ್ರಾ.ಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಮಹೇಶ್‌ ಹೆಗ್ಡೆ ಸಾವನ್ನಪ್ಪಿದ್ದಾರೆ. ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪರ ಬೇಳೂರು ಗ್ರಾ.ಪಂ.ವ್ಯಾಪ್ತಿಯಲ್ಲಿ  ಮತ ಪ್ರಯಾಚನೆ ಮಾಡಿ ವಾಪಾಸ್ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಾ.ಪಂ ಸದಸ್ಯೆ ಶ್ರೀಲತಾ ಪತಿಯಾಗಿರುವ ಮಹೇಶ್ ಹೆಗ್ಡೆ ಈ ಹಿಂದೆ ಬೇಳೂರು ಗ್ರಾಮಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.