ಮೊಬೈಲ್‌ಗೆ ಬರೋ ಲಿಂಕ್, ಕ್ಲಿಕ್ ಮಾಡೋ ಮುನ್ನ ಎಚ್ಚರ..!

ಮುಂಬೈ: ಏನೂ ಗೊತ್ತಿಲ್ಲದೆ ಇರೋರನ್ನ ಯಾಮಾರಿಸಬಹುದು. ಆದ್ರೆ, ಎಲ್ಲಾ ಗೊತ್ತಿರೋರನ್ನ ಯಾಮಾರಿಸೋಕೆ ಆಗಲ್ಲ ಅಂತಾ ಹೇಳ್ತಾರೆ. ಆದ್ರೆ ಇಲ್ಲಿ ಮಾತ್ರ ಮ್ಯಾಟರ್ ಫುಲ್ ಡಿಫರೆಂಟ್. ಎಂಬಿಬಿಎಸ್ ಓದಿರೋ ಡಾಕ್ಟ್ರೇ ಕಿಲಾಡಿಗಳ ಬುಟ್ಟಿಗೆ ಬಿದ್ದಿದ್ದಾರೆ. ಲಕ್ಷ ಲಕ್ಷ ಹಣವನ್ನು ಯಾರೋ ಅನಾಮಿಕನ ಜೇಬಿಗೆ ತಾವೇ ತುಂಬಿಸಿದ್ದಾರೆ.
ಆದ್ರೆ, ಆ ಡಾಕ್ಟರ್ ಸಾಹೇಬ್ರ ಅದೃಷ್ಟ ನೆಟ್ಟಗಿತ್ತು. ಅದಕ್ಕೆ ಉಪ್ಪು ತಿಂದೋನು ನೀರು ಕುಡೀಲೇಬೇಕು ಅನ್ನೋ ಹಾಗೆ, ಕದ್ದ ಖದೀಮ ಕಡೆಗೂ ತಗ್ಲಾಕ್ಕೊಂಡಿದ್ದಾನೆ.
ಒಂದು ಲಿಂಕ್ ಕ್ಲಿಕ್ ಮಾಡಿ 2.9 ಲಕ್ಷ ರೂಪಾಯಿ ಕಳ್ಕೊಂಡ..!
ಬಿಪಿನ್ ಮಹತೋ ಎಂಬ ವ್ಯಕ್ತಿ ಡಾಕ್ಟರ್ ಒಬ್ರಿಗೆ ಚಳ್ಳೆಹಣ್ಣು ತಿನ್ನಿಸಿ ಈಗ ಅಂದರ್ ಆಗಿದ್ದಾನೆ. ಈ ಬಿಪಿನ್ ಮುಂಬೈನ ಡಾಕ್ಟರ್ ಒಬ್ಬರಿಗೆ ಆನ್‌ಲೈನ್‌ನಲ್ಲಿ ಲಿಂಕ್‌ ಒಂದನ್ನ ಕಳಿಸಿದ್ದಾನೆ. ನಂತರ ಹೇಗೋ ನಂಬರ್ ಕಲೆಹಾಕಿ ವೈದ್ಯರಿಗೆ ಕರೆ ಮಾಡಿ ಬ್ಯಾಂಕ್ ನಿಮಗೆ ಒಂದು ದೊಡ್ಡ ಆಫರ್ ನೀಡಿದೆ. ಅದಕ್ಕೆ ನಿಮ್ಮ ಅಕೌಂಟ್ ನಂಬರ್ ನೀಡಿ ಅಂತಾ ಪುಸಲಾಯಿಸಿದ್ದಾನೆ. ನಂಬಿದ ವೈದ್ಯರು ಅವನಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ್ದಾರೆ. ನಂತರ ಇನ್ನೊಂದು ನಂಬರ್‌ನಿಂದ ಕಳಿಸಿದ್ದ ಲಿಂಕ್ ಅನ್ನು ಜಸ್ಟ್ ಕ್ಲಿಕ್ ಮಾಡಿದ್ದಾರೆ.
ತನಗೇನೋ ಆಫರ್ ಸಿಗುತ್ತೆ ಅಂದುಕೊಂಡಿದ್ದ ಡಾಕ್ಟರ್​ಗೆ, ಲಿಂಕ್ ಕ್ಲಿಕ್ ಮಾಡಿದ್ದರಿಂದ ಆದ ಯಡವಟ್ಟು ಗೊತ್ತಾಗಿದ್ದೇ, ಮೆಸೇಜ್ ಒಂದು ಬಂದ ಮೇಲೆ. ಡಾಕ್ಟರ್ ಮೊಬೈಲ್​ಗೆ, ನಿಮ್ಮ ಖಾತೆಯಿಂದ 2.9 ಲಕ್ಷ ರೂಪಾಯಿಗಳು ಕಡಿತವಾಗಿವೆ ಎಂಬ ಮೆಸೇಜ್ ಬಂದಿದೆ. ಆಗ ಏನೋ ಡೌಟ್ ಬಂದು, ಬಿಪಿನ್ ನೀಡಿದ್ದ ನಂಬರ್‌ಗೆ ಕರೆ ಮಾಡಿದ್ರೆ, ಆಸಾಮಿ ನಾಟ್ ರೀಚಬಲ್. ಆಗ ಮೋಸ ಹೋಗಿರೋದು ಗೊತ್ತಾಗಿ, ಡಾಕ್ಟರ್, ಪೊಲೀಸರಿಗೆ ಕಂಪ್ಲೆಂಟ್‌ ಕೊಟ್ಟಿದ್ದಾರೆ. ಸದ್ಯ ಪೊಲೀಸರು, ಡಾಕ್ಟರ್ ಖಾತೆಯಿಂದ ಯಾವ ಅಕೌಂಟ್​ಗೆ ಹಣ ಟ್ರಾನ್ಸ್​ಫರ್ ಆಗಿತ್ತು ಅನ್ನೋದನ್ನ ಪತ್ತೆ ಹಚ್ಚಿ ಆರೋಪಿಯನ್ನೂ ಖೆಡ್ಡಾಗೆ ಕೆಡವಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv