ಕೂಲಿ ಕಾರ್ಮಿಕನ ಇಂಗ್ಲಿಷ್​ ಕೇಳಿ ದಂಗಾದ ವರದಿಗಾರ

ನೋಯ್ಡಾ: ಬಿಹಾರದ ದಿನಗೂಲಿ ಕಾರ್ಮಿಕರೊಬ್ಬರು ನ್ಯೂಸ್​ ಚಾನೆಲ್​ ವರದಿಗಾರರೊಂದಿಗೆ ಇಂಗ್ಲಿಷ್​ನಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ಗಾರೆ ಕೆಲಸ ಮಾಡುವ ಕಾರ್ಮಿಕ, ನೋಯ್ಡಾ ಲೋಕಸಭಾ ಕ್ಷೇತ್ರದಲ್ಲಿ ಖಾಸಗಿ ಹಿಂದಿ ನ್ಯೂಸ್​ ಚಾನೆಲ್​ ವರದಿಗಾರರೊಂದಿಗೆ ಇಂಗಿಷ್​ನಲ್ಲಿ ಮಾತನಾಡಿದ್ದಾರೆ. 2019ರ ಚುನಾವಣೆ ಹಿನ್ನೆಲೆಯಲ್ಲಿ ವರದಿಗಾರ ಕೇಳಿದ ಪ್ರಶ್ನೆಗೆ ಇಂಗ್ಲಿಷ್​ನಲ್ಲೇ ಉತ್ತರಿಸಿದ್ದಾರೆ.

ವರದಿಗಾರ ಕೇಳಿದ ಪ್ರಶ್ನೆಯೊಂದಕ್ಕೆ ‘ಯೆಸ್​ ಐ ವಾಂಟ್​ ಟೂ ವರ್ಕ್’​ (yes i want to work) ಅಂತಾ ಕಾರ್ಮಿಕ ಇಂಗ್ಲಿಷ್​ನಲ್ಲಿ ಉತ್ತರಿಸಿದ್ದಾರೆ. ಅವರ ಉತ್ತರ ಕಂಡು ಇಂಪ್ರೆಸ್​ ಆದ ವರದಿಗಾರ ಇಂಗ್ಲಿಷ್​​? ಎಂದು ಅಚ್ಚರಿಗೊಂಡಾಗ, ಯೆಸ್​..ವೈ ನಾಟ್​​ ಎಂದಿದ್ದಾರೆ. ಹೀಗಾಗಿ ವರದಿಗಾರ ಅವರನ್ನ ಮತ್ತಷ್ಟು ಮಾತನಾಡಿಸಿದ್ದಾರೆ. ಇದಕ್ಕೆ ಕಾರ್ಮಿಕ ಸಂಪೂರ್ಣ ಇಂಗ್ಲಿಷ್​ನಲ್ಲೇ ಉತ್ತರ ನೀಡಿದ್ದಾರೆ. ನೀವು ಏನು ಓದಿದ್ದೀರಿ ಎಂಬ ಪ್ರಶ್ನೆಗೆ, ನಾನೊಬ್ಬ ಗ್ರಾಜುಯೆಟ್​. ಭಾಗಲ್ಪುರ್​ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದೇನೆ ಎಂದಿದ್ದಾರೆ. ಮತ್ತೆ ಒಳ್ಳೆಯ ಕೆಲಸ ಯಾಕೆ ಪಡೆಯಲಿಲ್ಲ ಎಂಬ ಪ್ರಶ್ನೆಗೆ, ನಾನು ಆ ಸಮಯದಲ್ಲಿ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.

ಇನ್ನು ಇವತ್ತಿನ ಮಾಡರ್ನ್​​​​​ ಯುಗಕ್ಕೆ ಪ್ರಧಾನಿಯಾಗಿ ಮೋದಿ ಬೆಸ್ಟ್. ನಮ್ಮ ಕಾಲದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಅವತ್ತಿನ ಕಾಲಕ್ಕೆ ಅವರು ಬೆಸ್ಟ್​ ಅಂತಾ ಉತ್ತರಿಸಿದ್ದಾರೆ. ಇನ್ನು ಇವರ ಇಂಗ್ಲಿಷ್​ ಕೇಳಿ ಸುತ್ತಲೂ ನೆರೆದಿದ್ದ ಜನರು ಪ್ರಶಂಸೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದ್ರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು​, ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಅಲ್ಲದೇ 5000 ಸಾವಿರಕ್ಕೂ ಹೆಚ್ಚು ಕಮೆಂಟ್ಸ್​​​ ಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv