ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಬಿಗ್​​ಬಾಸ್ ಸ್ಪರ್ಧಿ ಕವಿತಾ ಗೌಡ ದೂರು

ಬೆಂಗಳೂರು:  ಬಿಗ್​​ಬಾಸ್ ಮನೆಯಲ್ಲಿ  ತನಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ​​​ ಸೀಜನ್​​ 6ರ  ಫೈನಲಿಸ್ಟ್​ ಕವಿತಾ ಗೌಡ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. ಬಿಗ್​​ಬಾಸ್ ನಲ್ಲಿ ನಡೆದ ಘಟನೆಯೊಂದನ್ನು ಹಿಡಿದು ಪ್ರತಿಸ್ಪರ್ಧಿ ಆಂಡ್ರ್ಯೂ ಜೈಪಾಲ್ ವಿರುದ್ಧ ಕವಿತಾ ಗೌಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ದೂರು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ ಹೊರ ಬಂದ ಮೇಲೂ ಆಂಡ್ರ್ಯೂ ಕಿರುಕುಳ ನೀಡಿದ್ದಾರೆ. ಶೋ ಮುಗಿಸಿದ ಬಳಿಕವೂ, ಹೋದಲ್ಲಿ ಬಂದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಆ್ಯಂಡ್ರೂ ಮತ್ತು ಬಿಗ್ ಬಾಸ್ ಶೋ ಮೇಲ್ವಿಚಾರಕ ಗುರುದಾಸ್ ಶೆಣೈ ವಿರುದ್ಧ  ಕವಿತಾ ಗೌಡ ದೂರು ನೀಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಅಕ್ಟೋಬರ್ 20 ರಿಂದ ಜನವರಿ 19ವರೆಗೆ ಅಂದರೆ ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಏನೇನ್ ನಡೆದಿದೆಯೋ ಗೊತ್ತಿಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆ್ಯಂಡಿ ಕವಿತಾ ಮೇಲೆ ಹಿಂಸೆ ಮಾಡಿದ್ದಾರಂತೆ ಎಂದು ಹೇಳಿದ್ರು.

ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಖಾಸಗಿ ಚಾನಲ್​​ನಲ್ಲಿ ಕುಳಿತು ಆ್ಯಂಡಿ ಅವಾಚ್ಯ ಶಬ್ದ ಬಳಸಿದ್ದಾರಂತೆ. ಇದ್ರಿಂದ ಮನನೊಂದ ಕವಿತಾ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆ್ಯಂಡಿ ಹಾಗೂ ಗುರುರಾಜ್ ಶಣೈ ಇಬ್ಬರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಆ್ಯಂಡಿ ಕೊಡ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಶೋ ನೋಡಿಕೊಳ್ತಿದ್ದ ಗುರುರಾಜ್ ರಾಜ್ ಶೆಣೈ ಬಗ್ಗೆ ಕವಿತಾ ತಿಳಿಸಿದ್ರಂತೆ. ಆದರೆ ಆ್ಯಂಡಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ಹೀಗಾಗಿ ಅವರ ವಿರುದ್ದವೂ ದೂರು ನೀಡಿದ್ದಾರೆ ಎಂದು ತಿಳಿಸಿದ್ರು.

ಇನ್ನು ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಕವಿತಾ ಗೌಡ, ತಪ್ಪು ತಿದ್ದಿಕೊಳ್ಳೋದಾದ್ರೆ ತಿದ್ದಿಕೊಳ್ಳಲಿ ಅನ್ನೋದು ನನ್ನ ಭಾವನೆ. ಕಂಪ್ಲೇಂಟ್ ಅಂತೂ ಕೊಟ್ಟಿದ್ದೇನೆ, ಕೆಲವು ವೀಡಿಯೋಗಳು ವೂಟ್​​ನಲ್ಲಿವೆ. ಅವುಗಳೇ ಸಾಕು ಸಾಕ್ಷಿಗೆ ಎಂದು ಹೇಳಿದ್ರು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv