ಅಬ್ಬಬ್ಬಾ.. 3 ಕೆ.ಜಿ ಅಣಬೆ..!

ಕೊಡಗು: ಮಳೆಗಾಲದಲ್ಲಿ ಸಹಜವಾಗಿ ಗದ್ದೆ, ತೋಟಗಳಲ್ಲಿ ಅಣಬೆಗಳು ಬೆಳೆಯೋದು ಸಾಮಾನ್ಯ. ಕೆಲವೊಮ್ಮೆ ಹಲವು ವಿಶೇಷತೆಗಳ ಮೂಲಕ ಅಣಬೆಗಳು ಎಲ್ಲರ ಗಮನಸೆಳೆಯುತ್ತವೆ. ಇಲ್ಲಿ ಆಗಿರುವುದು ಕೂಡಾ ಅದೇ, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಕೊಂಗಂಡ ಪಂಚು ಎಂಬುವವರ ತೋಟದಲ್ಲಿ ಭಾರೀ ಗಾತ್ರದ ಅಣಬೆಯೊಂದು ಕಂಡುಬಂದಿದೆ. ಸುಮಾರು 3 ಕೆ.ಜಿ. ತೂಕವಿರುವ ಅಣಬೆ ಸದ್ಯ ಮಾಯಮುಡಿ ಗ್ರಾಮದಲ್ಲಿ ಹವಾ ಸೃಷ್ಟಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv