ಔಟಾದ ಕೋಪವನ್ನ ಫಿಂಚ್​ ತೀರಿಸಿಕೊಂಡಿದ್ದು ಹೇಗೆ ಗೊತ್ತಾ..?

ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಔಟಾದಾಗ ಬ್ಯಾಟ್ ಬಿಸಾಡಿ ಸಿಟ್ಟು ತೋರಿಸೋದು, ಎದುರಾಳಿ ಆಟಗಾರರಿಗೆ ಬೈಯುತ್ತಾ ಪೆವಿಲಿಯನತ್ತ ತೆರಳೋದು ಕಾಮನ್​. ಆದ್ರೆ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್​ ತಮ್ಮ ಕೋಪವನ್ನ ಬಡಪಾಯಿ ಚೇರ್ ಮೇಲೆ ತೋರಿಸಿದ್ದಾರೆ. ತಮ್ಮೆಲ್ಲಾ ಫ್ರಸ್​ಟ್ರೇಶನ್​ನ ಚೇರ್ ಮೇಲೆ ಹಾಕಿದ್ದಾರೆ.
ಹೌದು, ಭಾನುವಾರ ನಡೆದ ಆಸ್ಟ್ರೇಲಿಯಾ ಬಿಗ್​ಬ್ಯಾಶ್​ ಲೀಗ್ ಫೈನಲ್​ ಪಂದ್ಯದಲ್ಲಿ, ಮೆಲ್ಬೋರ್ನ್ ರೆನಿಗೇಡ್ಸ್​ ತಂಡದ ಫಿಂಚ್ ಅಧ್ಬುತ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿದ್ರು. ಅದೇ ವಿಶ್ವಾಸದಲ್ಲಿ ಅಂಗಳಕ್ಕಿಳಿದಿದ್ರು. ಆದ್ರೆ ಆಗಿದ್ದೇ ಬೇರೆ. ರೆನಿಗೇಡ್ಸ್​​ ಇನ್ನಿಂಗ್ಸ್​​ ವೇಳೆ ಮೆಲ್ಬೋರ್ನ್ ಸ್ಟಾರ್ಸ್​ನ ಬೌಲರ್ ಜಾಕ್ಸನ್ ಬರ್ಡ್​ ಎಸೆದ 6ನೇ ಓವರ್​ನ ಕೊನೆಯ ಎಸೆತದಲ್ಲಿ, ಕೆಮರೂನ್ ವೈಟ್​ ಸ್ಟ್ರೇಟ್​ ಡ್ರೈವ್ ಮಾಡಿದ್ರು. ಆದ್ರೆ ಜಾಕ್ಸನ್​ ಕಾಲಿಗೆ ಬಡಿದ ಚೆಂಡು ವಿಕೆಟ್​ ಬೆಲ್ಸ್​ ಎಗರಿಸಿತು. ಇದರಿಂದ ನಾನ್​ಸ್ಟ್ರೈಕ್​ನಲ್ಲಿ ಕ್ರೀಸ್​ನಿಂದ ಆಚೆ ಇದ್ದ ಫಿಂಚ್,​ ರನೌಟ್​ ಆಗಿ ಪೆವಿಲಿಯನ್ ದಾರಿ ಹಿಡಿದ್ರು. ಆದ್ರೆ ಗ್ರೌಂಡ್ ದಾಟಿ ಡ್ರೆಸ್ಸಿಂಗ್ ರೂಮ್​ಗೆ ತೆರಳುವಾಗ, ಫಿಂಚ್ ಸೈಡಿಗಿದ್ದ ಚೇರ್​ಗೆ ಬ್ಯಾಟ್​ನಿಂದ ಎರಡು ಬಾರಿ ಜೋರಾಗಿ ಹೊಡೆದುಕೊಂಡು ಹೋದ್ರು. ಈ ವಿಡೀಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಇಡೀ ಟೂರ್ನಿಯಲ್ಲಿ ಫಿಂಚ್ ಬಾರಿಸಿದ ಬೆಸ್ಟ್ ಶಾಟ್​ ಇದೆ ಎಂದು ಟ್ರೋಲ್​ ಮಾಡ್ತಿದ್ದಾರೆ.