ವಿಚಾರಣೆಗೆ ಗೈರಾಗಿ ಹಳೇ ಚಾಳಿ ಮುಂದುವರೆಸಿದ ಸ್ವಾಮಿ ನಿತ್ಯಾನಂದ

ರಾಮನಗರ: ರಾಸಲೀಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಬಿಡದಿ ನಿತ್ಯಾನಂದ ಸ್ವಾಮಿ ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದಾನೆ. ಕೋರ್ಟ್​ಗೆ ಹಾಜರಾಗದೇ ಮೇಲ್ಮನವಿ ಸಲ್ಲಿಸಿಕೊಂಡು ದಿನ ದೂಡುತ್ತಿದ್ದಾನೆ ಅಂತಾ ಸರ್ಕಾರಿ ಪರ ವಕೀಲ ವಡವಡಗಿ ಮಾಹಿತಿ ನೀಡಿದ್ದಾರೆ. ಕಳೆದ ಮೂರು ವಿಚಾರಣೆಗೆ ನಿತ್ಯಾನಂದ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಇನ್ನು ಹೈಕೋರ್ಟ್ ಆದೇಶದಂತೆ ರಾಮನಗರ ಜಿಲ್ಲಾ ಸತ್ರ ನ್ಯಾಯಲಯದಲ್ಲಿ ಇಂದು ವಿಚಾರಣೆ ನಡೆಯಬೇಕಿತ್ತು. ಆದ್ರೆ ನಿತ್ಯಾನಂದ ಸೇರಿದಂತೆ ಎಲ್ಲಾ ಆರೂ ಜನ ಆರೋಪಿಗಳೂ ಇವತ್ತೂ ಕೂಡಾ ಗೈರಾಗಿದ್ದಾರೆ. ಇನ್ನು ಕೋರ್ಟ್​ ಆದೇಶ ಪ್ರಶ್ನಿಸಿ ಮತ್ತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv