ಕಾಫಿನಾಡಿಗೂ ಕಾಲಿಟ್ಟ ಬುರ್ಖಾ ವಿವಾದ.!

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕಾಲೇಜ್​ವೊಂದರಲ್ಲಿ ಬುರ್ಖಾ ವಿವಾದ ಭುಗಿಲೆದ್ದಿದೆ. ಸಾಗರ, ಸಹ್ಯಾದ್ರಿ, ತೀರ್ಥಹಳ್ಳಿ ಬಳಿಕ ಇದೀಗ ಕೊಪ್ಪ ಸರದಿ. ಮುಸ್ಲಿಂ ವಿದ್ಯಾರ್ಥಿನಿಯರು ರೆಸ್ಟ್ ರೂಂನಲ್ಲಿ ಬುರ್ಖಾ ತೆಗೆದು ಬರ್ತಿದ್ರು. ಆದರೆ ಈ ವರ್ಷ ಬುರ್ಖಾ ಧರಿಸೇ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ ಎಂದು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಲೇಜಿನಲ್ಲಿ ಬುರ್ಖಾ ನಿಷೇಧಿಸುವಂತೆ ಎಬಿವಿಪಿ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದ ಪ್ರಿನ್ಸಿಪಾಲ್ ಅನಂತ್, ಅಂತಹ ಕಾನೂನು ನಮ್ಮಲ್ಲಿ ಇಲ್ಲ ಎಂದಿದ್ರಂತೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ನಿನ್ನೆ ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬಂದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv