ದೇಶದಲ್ಲೇ ಮೊದಲ ಬಾರಿಗೆ ಭೂಪಾಲ್​ನಲ್ಲಿ ಗೋವುಗಳಿಗಾಗಿ ಸ್ಮಶಾನ

ಭೂಪಾಲ್​: ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಗೋವುಗಳಿಗಾಗಿ ಸ್ಮಶಾನ ನಿರ್ಮಿಸುವುದಾಗಿ ಭೂಪಾಲ್​ನ ಮೇಯರ್​ ಅಲೋಕ್​ ವರ್ಮಾ ತಿಳಿಸಿದ್ದಾರೆ. ಈ ಹಿನ್ನೆಲೆ ಭೂಪಾಲ್​ ಮುನ್ಸಿಪಾಲ್​ ಕಾರ್ಪೊರೇಷನ್​ ಸ್ಮಶಾನ ನಿರ್ಮಾಣ ಮಾಡಲು ಸೂಕ್ತ ಹಾಗೂ ಶಾಂತವಾದ ಸ್ಥಳವನ್ನು ಹುಡುಕುತ್ತಿದೆ. ಇನ್ನೂ ಪಶು ಸಂಗೋಪನೆ ಸಚಿವ ಲಖಾನ್​ ಸಿಂಗ್​ ನಗರಗಳಲ್ಲಿರುವ ಬೀದಿ ಹಸುಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಬೀದಿ ಹಸುಗಳಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿದೆ. ಹಾಗಾಗಿ ಸಹಾನುಭೂತಿಯಿಂದ ಗೋವುಗಳ ನಿರ್ವಹಣೆ ಮಾಡಬೇಕು. ಎಲ್ಲದಕ್ಕೂ ಹೆಚ್ಚಾಗಿ ಬೀದಿ ಹಸುಗಳಿಗೆ ಗ್ರಾಮಗಳಲ್ಲಿ, ಹೈವೇ ಬಳಿ, ಮುನ್ಸಿಪಾಲ್​ ಬಳಿ ತಾತ್ಕಾಲಿಕ ಗೋಶಾಲೆಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv