ಆಧ್ಯಾತ್ಮಿಕ ಚಿಂತಕ ಭಯ್ಯೂಜೀ ಮಹರಾಜ್​ ಆತ್ಮಹತ್ಯೆ..!

ಮಧ್ಯಪ್ರದೇಶ: ಮಧ್ಯಪ್ರದೇಶದ ಇಂದೋರ್​ನ ಧಾರ್ಮಿಕ ಗುರು ಭಯ್ಯೂಜೀ ಮಹಾರಾಜ್​ ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಇಂದೋರ್​ನ ತಮ್ಮ ಸ್ವ ಗೃಹದಲ್ಲಿಯೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆಗೆ ಮಾಡಿಕೊಂಡಿದ್ದಾರೆ. ತಲೆಗೆ ಗುಂಡು ಹಾರಿಸಿಕೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೋಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಲತಃ ಉಧಾಮ್​ ಸಿಂಗ್​ದೇಶಮುಖ್​ ಹೆಸರಿನ ಇವರು ಭಯ್ಯೂಜಿ ಮಹಾರಾಜ್​​ ಅಂತಾನೆ ಪ್ರಸಿದ್ಧಿ ಪಡೆದಿದ್ದರು. ಇನ್ನು ಇವರಿಗೆ ಕಾಂಗ್ರೆಸ್​, ಬಿಜೆಪಿ, ಆರ್​ಎಸ್​ಎಸ್​, ಶಿವಸೇನೆಯ ಸಂಪರ್ಕವಿತ್ತು. ಅಲ್ಲದೇ ಪ್ರಬಲ ರಾಜಕೀಯ ನಾಯಕರ ಸಂಪರ್ಕವಿದ್ದು, ಅವರಿಗೆ ಧಾರ್ಮಿಕ ಸಲಹೆಗಾರರೂ ಕೂಡಾ ಆಗಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಶಿಂಧೆ, ವಿಲಾಸ್​ರಾವ್​ ದೇಶಮುಖ್​, ಅಲ್ಲದೆ ಆರ್​ಎಸ್​ಎಸ್​ ಮುಖ್ಯಸ್ಥ ಮೊಹನ್​ ಭಾಗವತ್​ ಕೂಡಾ ಇವರಿಂದ ಧಾರ್ಮಿಕ ಸಲಹೆ ಪಡೆಯುತ್ತಿದ್ದರು ಎನ್ನಲಾಗ್ತಿದೆ. ​ಇನ್ನು ಇವರು ಬರೆದು ಇಟ್ಟಿದ್ದಾರೆ ಎನ್ನಲಾದ ಡೆತ್​​ ನೋಟ್​ ಸಿಕ್ಕಿದ್ದು, ತಮಗೆ ಸಾಕಾಗಿ ಹೋಗಿದೆ. ಸುಸ್ತಾಗಿದೆ ಆ ಕಾರಣದಿಂದಾಗಿ ಈ ಜಗತ್ತು ತ್ಯಜಿಸುತ್ತಿದ್ದೇನೆ ಅಂತಾ ಅವರು ಬರೆದಿದ್ದಾರೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv