ಮೈಸೂರಲ್ಲಿ ‘ಭರಾಟೆ’ ಘರ್ಜನೆ ಮತ್ತೆ ಶುರು..!

‘ಮಫ್ತಿ’ ಚಿತ್ರದ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಭರಾಟೆ ಸಿನಿಮಾ ಸಖತ್ತಾಗಿಯೇ ಸದ್ದು ಮಾಡುತ್ತಿದೆ. ಭರ್ಜರಿ ಚೇತನ್ ನಿರ್ದೇಶನದಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಹಿಂದೆ ರಾಜಸ್ಥಾನ, ಹೈದರಾಬಾದ್​ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅದ್ಧೂರಿ ಸೆಟ್​ ಹಾಕಿ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಮಂಡ್ಯ, ಮೈಸೂರು ಭಾಗಗಳಲ್ಲೂ ಚಿತ್ರೀಕರಣ ನಡೆಸಿತ್ತು. ಇದೀಗ ಮತ್ತೇ ಮೈಸೂರು ಭಾಗಕ್ಕೆ ಚಿತ್ರತಂಡ ವಾಪಸ್ ಆಗಿದೆ.

ಮುರಳಿ ಜೊತೆ ಶ್ರೀಲೀಲಾ ಡ್ಯೂಯೆಟ್​..!
ಮೈಸೂರು ಭಾಗದಲ್ಲಿನ ಅದ್ಭುತ ಲೊಕೇಷನ್​ನಲ್ಲಿ ವಿಶೇಷ ಸೆಟ್ ಹಾಕೋ ಮೂಲಕ ನಾಯಕಿ ಶ್ರೀಲೀಲಾ ಹಾಗೂ ಶ್ರೀಮುರಳಿ ಜೋಡಿಯ ಕೆಲ ದೃಶ್ಯಗಳ ಶೂಟಿಂಗ್​ ನಡೆಸಲು ಚಿತ್ರತಂಡ ಆಗಮಿಸಿದೆ. ಸದ್ಯ ಶ್ರೀಲೀಲಾ ಅವರ ಟಾಕಿ ಪೋಷನ್ ಕೂಡ ಕಂಪ್ಲೀಟ್ ಆಗಿದೆ. ಅಂದಹಾಗೆ ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ಜಗಪತಿಬಾಬು ಸೇರಿದಂತೆ ತ್ರಿಮೂರ್ತಿಗಳಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಶರ್ಮ ನಟಿಸಿದ್ದು ಚಿತ್ರ ಕುತೂಹಲ ಮೂಡಿಸಿದೆ.

ಇನ್ನು ಪೋಷಕ ಪಾತ್ರದಲ್ಲಿ ನಟಿ ತಾರಾ ಕೂಡ ಬಣ್ಣ ಹಚ್ಚಿದ್ದು ವಿಶೇಷ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ. ಈಗಾಗಲೇ ಅದ್ಧೂರಿ ಸೆಟ್ ಹಾಗೂ ಮೇಕಿಂಗ್​ನಿಂದಲೇ ಕ್ಯೂರಿಯಾಸಿಟಿ ಮೂಡಿಸಿರೋ ಭರಾಟೆ ಹೇಗೆಲ್ಲಾ ಇರುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv