‘ಮೋದಿಗೆ ಈ ಬಾರಿ ನಾವು ಬೆಂಬಲ ಕೊಡ್ತೀವಿ’-ಬಿಸ್ಮಿಲ್ಲಾ ಖಾನ್ ಕುಟುಂಬಸ್ಥರಿಂದ ಘೋಷಣೆ

ನವದೆಹಲಿ: ಕಳೆದ ಲೋಕಸಭಾ ಚುನಾವಣೆ ವೇಳೆ ವಾರಣಾಸಿಯಿಂದ ಸ್ಪರ್ಧಿಸಲಿದ್ದ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿಯವರಿಗೆ ನಾಮಿನೇಶನ್ ವೇಳೆ ಪ್ರೊಪೋಸರ್​ ಆಗುವಂತೆ ನಮ್ಮನ್ನು  ಬಿಜೆಪಿ ಕೇಳಿಕೊಂಡಿದ್ದರೂ ನಾವು ಒಪ್ಪಿರಲಿಲ್ಲ. ಆದ್ರೆ, ಈ ಬಾರಿ ನಾವು ಸ್ವಇಚ್ಛೆಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ. ಮಾತ್ರವಲ್ಲ ಅವರು ನಾಮಿನೇಶನ್ ಸಲ್ಲಿಸುವಾಗ ಅವಕಾಶ ಸಿಕ್ಕರೆ ಅವರೊಂದಿಗೆ ಹೆಜ್ಜೆ ಹಾಕುತ್ತೇವೆ ಅಂತಾ ಶಹನಾಯಿ ವಾದಕ, ಭಾರತ ರತ್ನ ದಿವಂಗತ ಬಿಸ್ಮಿಲ್ಲಾ ಖಾನ್ ಕುಟುಂಬಸ್ಥರು ಆಶಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಂದು ಹೇಳಿಕೆ ಕೊಟ್ಟಿರುವ ಅವರ ಕುಟುಂಬಸ್ಥರು ಕಾಂಗ್ರೆಸ್ ನಾಯಕರು ಹೇಳಿದ್ದರಿಂದ ತಾವು ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ಸಿಗರು ಬಂದು ನಮ್ಮ ಹಿರಿಯರ ದಾರಿ ತಪ್ಪಿಸಿದ್ದರು. ಆದ್ರೆ ಈ ಬಾರಿ ತಾವು ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಕೆ ಮಾಡುವಾಗ ಅವಕಾಶ ಸಿಕ್ಕರೆ ಅನುಮೋದಕರಾಗಿ ಅದಕ್ಕೆ ಸಹಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ತಾವು ಪ್ರಧಾನಿ ಮೋದಿಗೆ ಪತ್ರ ಬರೆದಿರುವುದಾಗಿ ಭಾರತ ರತ್ನ ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ನಾಸೀರ್ ಅಬ್ಬಾಸ್ ಬಿಸ್ಮಿಲ್ಲಾ ತಿಳಿಸಿದ್ದಾರೆ. ಹಿಂದೆ ಕಾಂಗ್ರೆಸ್ಸಿನವರು ನಮ್ಮ ಕುಟುಂಬದ ಬ್ರೈನ್ ವಾಷ್ ಮಾಡಿದ್ದರು. ನಮ್ಮ ತಾತಾ ಬಿಸ್ಮಿಲ್ಲಾ ಖಾನ್ ಸಾಬ್ ಅವರು ಮೂಲತಃ ಕಾಂಗ್ರೆಸ್ಸಿನವರು. ಆದ್ರೆ ನಮ್ಮ ತಾತನವರನ್ನು ಭಾರತ ರತ್ನ ಪ್ರಶಸ್ತಿಯಿಂದ ಪುರಸ್ಕರಿಸಿದ್ದು ಮಾತ್ರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ನಾಸೀರ್ ಅಬ್ಬಾಸ್ ಬಿಸ್ಮಿಲ್ಲಾ ಇದೇ ವೇಳೆ ಹೇಳಿದ್ದಾರೆ.

ವಿಶೇಷ ಅಂದ್ರೆ ಡಾ.ರಾಜಕುಮಾರ್ ನಟನೆಯ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಸನಾದಿ ನುಡಿಸಿದ್ದ ಬಿಸ್ಮಿಲ್ಲಾ ಖಾನ್, ಕನ್ನಡಿಗರ ಮನವನ್ನೂ ಗೆದ್ದಿದ್ದರು.


ನಾಸೀರ್ ಅಬ್ಬಾಸ್ ಬಿಸ್ಮಿಲ್ಲಾ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv