ಸಲ್ಮಾನ್‌ನ ‘ಭಾರತ್‌’ ಟ್ರೈಲರ್ ರಿಲೀಸ್! 5 ಗೆಟಪ್‌ನಲ್ಲಿ ಸಲ್ಲು ಮಿಂಚು!

ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಭಾರತ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. 3 ನಿಮಿಷ 11 ಸೆಕೆಂಡ್‌ಗಳ ಟ್ರೈಲರ್‌ ಒಂದು ಕಥೆಯನ್ನ ಹೇಳುತ್ತಿರುವಂಥೆ ಭಾಸವಾಗುವಷ್ಟು ರೋಚಕವಾಗಿದೆ. 1964 ರಲ್ಲೊಂದು ಕಥೆ.. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತ್ರದ ಕೆಲ ವರ್ಷಗಳಿಂದ ಶುರುವಾಗೋ ಸಲ್ಲು ಕಥೆ. 2010 ರಲ್ಲಿ ಕೊನೆಯಾಗುತ್ತೆ. ಈ ಅಂತರದಲ್ಲಿ ಭಾರತ್ ಅನ್ನೋ ವ್ಯಕ್ತಿಯಾಗಿ ಕಾಣಿಸಿಕೊಂಡಿರೋ ಸಲ್ಮಾನ್‌ನ ವೈಯಕ್ತಿಕ ಜೀವನದ ಕಥೆಯಷ್ಟೇ ಅಲ್ಲ, ಜೊತೆಜೆೊತೆಗೆ ಆ ಕಾಲಘಟ್ಟದಲ್ಲಿ ದೇಶ ಇಬ್ಭಾಗವಾಗುವಾಗ ಸ್ಥಿತಿಗತಿ, ತವಕ ತಲ್ಲಣಗಳನ್ನೂ ತೋರಿಸೋ ಪ್ರಯತ್ನವಿದೆ. ಸಲ್ಲು ಹದಿಹರೆಯದಿಂದ ಸುಮಾರು 60 ವರ್ಷ ವಯಸ್ಸಿನವರೆಗೂ 5 ಗೆಟಪ್‌ಗಳಲ್ಲಿ ಮಿಂಚಿದ್ದಾರೆ. ಸಲ್ಮಾನ್ ಸರ್ಕಸ್​ ಒಂದರಲ್ಲಿ ​ ಸ್ಟಂಟ್​ ಕಲಾವಿದ. ರೆಟ್ರೋ ಸ್ಟೈಲ್‌ನಲ್ಲಿ ಯುವಕ ಸಲ್ಲು ಕಲರ್‌ಫುಲ್ ಲೈಫ್, ನಂತ್ರ ಬದಲಾಗೋ ಜೀವನ, ಈ ನಡುವೆ ಪ್ರೇಮಿಯಾಗಿ ಎಂಟ್ರಿ ಕೊಡೋ ಕತ್ರಿನಾ ಕೈಫ್, ತನ್ನ ನೆಲಕ್ಕಾಗಿ ಅಪ್ಪನಿಗೆ ಕೊಟ್ಟ ಮಾತು, ಅದನ್ನ ಉಳಿಸಿಕೊಳ್ಳೋಕೆ ದೇಶಪ್ರೇಮಿ ಭಾರತ್ ಹೋರಾಟ ಇದೆಲ್ಲದರ ಮಿಕ್ಸರ್ ಈ ಟ್ರೈಲರ್‌ನಲ್ಲಿದೆ. ಅದ್ರಲ್ಲೂ ಸಲ್ಮಾನ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ ಜಸ್ಟ್ ಸೂಪರ್ಬ್‌.

ನಟ ಜಾಕಿ ಶ್ರಾಫ್,ನಟಿ ತಬು, ದಿಶಾ ಪಟಾನಿ, ಕತ್ರಿನಾ ಕೈಫ್ ಸೇರಿದಂತೆ ಹಲವು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಕೊರಿಯಾ ಭಾಷೆಯ ‘ಆ್ಯನ್​ ಆಡ್​ ಟು ಮೈ ಫಾದರ್​’ ನಾಟಕದ ಪ್ರೇರಣೆಯಿಂದ ಕಥೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲಿ ಅಬ್ಬಾಸ್​ ಜಫರ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ವರ್ಷದ ಈದ್​​ ಪ್ರಯುಕ್ತ ಸಿನಿಮಾ ಬಿಡುಗಡೆ ಆಗುತ್ತಿದೆ.