‘ಭಾರತ್’​​ಗಾಗಿ ಹೊಸ ಅವತಾರವೆತ್ತಿದ ಸಲ್ಲು ಭಾಯ್!

ಬಾಲಿವುಡ್ ಕಿಂಗ್ ಸಲ್ಮಾನ್ ಖಾನ್ ಸಿನಿಮಾಗಳು ಅಂದ್ರೆ ದೊಡ್ಡ ಕ್ರೇಜ್. ಭಜರಂಗಿ ಬಾಯಿಜಾನ್, ಟೈಗರ್ ಜಿಂದಾ ಹೈ’ ಸೇರಿದಂತೆ ಹಲವು ದೇಶಭಕ್ತಿ ಸಾರುವ ಸಿನಿಮಾಗಳಲ್ಲಿ ಮಿಂಚಿದ್ದ ಸಲ್ಲುಬಾಯ್ ಇದೀಗ ‘ಭಾರತ್’ ಅನ್ನೋ ಚಿತ್ರದಲ್ಲಿ ಅಬ್ಬರಿಸೋಕೆ ರೆಡಿಯಾಗ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆಯಾಗಿ ನಟಿಸಿರೋ ಭಾರತ್‌ ಚಿತ್ರದ ಮೋಷನ್ ಟೀಸರ್​​ ನಿಂದಲೇ ಸಖತ್ ಸೌಂಡ್ ಮಾಡಿತ್ತು. ಇದೀಗ ಚಿತ್ರತಂಡ ಸಲ್ಮಾನ್​ರ ಹೊಸ ಗೆಟಪ್​ನಲ್ಲಿರೋ ಮೊದಲ ಪೋಸ್ಟರ್ ರಿಲೀಸ್ ಮಾಡಿದೆ.

ಆರು ಗೆಟಪ್ ಸಲ್ಲು ಕಮಾಲ್..!
ಚಿತ್ರದಲ್ಲಿ ಸಲ್ಮಾನ್ 6 ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೌಕಾ ಪಡೆಯ ಅಧಿಕಾರಿ, ಸ್ಟಂಟ್​ ಮಾಸ್ಟರ್, ಹಾಗೂ ಮುದುಕನ ರೋಲ್ ಸೇರಿದಂತೆ ಒಟ್ಟು 6 ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಕನ್ನಡಕ ಹಾಕಿ ಗಡ್ಡಧಾರಿಯಾಗಿ ವಿಭಿನ್ನ ಲುಕ್​ನಲ್ಲಿ ದರ್ಶನ ಕೊಟ್ಟಿರೋ ಪೋಸ್ಟರ್​ ರಿಲೀಸ್ ಮಾಡಿದೆ. ಇನ್ನು, ದಕ್ಷಿಣ ಕೊರಿಯಾದ ‘ ode to my father’ ಚಿತ್ರದ ರಿಮೇಕ್ ಇದಾಗಿದೆ. ಭಾರತದ 70 ವರ್ಷಗಳ ಸಂಸ್ಕೃತಿ, ಹಲವು ದೇಶಗಳಲ್ಲಿ ಹೇಗೆ ಹರಡಿದೆ ಅನ್ನೋದರ ಕುರಿತ ದೇಶಭಕ್ತಿ ಸಾರುವ ಕಥೆ ಹೊಂದಿದೆ. ಚಿತ್ರದಲ್ಲಿ ದಿಶಾ ಪಟನಿ, ಸುನಿಲ್ ಗ್ರೋವರ್, ಆಸಿಫ್ ಶೇಕ್ ಸೇರಿದಂತೆ ಬಹುತೇಕರು ಬಣ್ಣ ಹಚ್ಚಿದ್ದು ಚಿತ್ರಕ್ಕೆ ಅಲಿ ಅಬ್ಬಾಸ್ ಜಾಫರ್ ನಿರ್ದೇಶನವಿದೆ.