ಭಾರತ್‌ ಬಂದ್‌ಗೆ ಯಾಱರ ಬೆಂಬಲ? ಯಾಱರ ಬೆಂಬಲವಿಲ್ಲ?

ರಾಮನಗರ: ಪೆಟ್ರೋಲ್, ಡೀಸಲ್‌ ಹಾಗೂ ಎಲ್.ಪಿ.ಜಿ ದರ ಏರಿಕೆಯನ್ನು ಖಂಡಿಸಿ‌ ಕಾಂಗ್ರೆಸ್​ ಮತ್ತು ಎಡಪಕ್ಷಗಳು ದೇಶ್ಯಾದ್ಯಾಂತ ಭಾರತ್​ ಬಂದ್​ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ 10 ರಂದು ನಡೆಯಲಿರುವ ಭಾರತ್​ ಬಂದ್​ಗೆ ನಗರದಲ್ಲಿ ಯಾವ ಯಾವ ಸಂಘಟನೆಗಳು ಬೆಂಬಲಿಸಿವೆ? ಮತ್ತು ಬೆಂಬಲಿಸುತ್ತಿಲ್ಲ? ಎಂಬುವುದರ ಲಿಸ್ಟ್‌ ಇಲ್ಲಿದೆ.
ಜಯ ಕರ್ನಾಟಕ ಸಂಘಟನೆ ಮತ್ತು ಐಎನ್​ಟಿಯುಸಿ ಈಗಾಗಲೇ ಬಂದ್​ಗೆ ಬೆಂಬಲ ಘೋಷಿಸಿವೆ.

ಇನ್ನು, ಬಂದ್​ಗೆ ಬೆಂಬಲ ನೀಡುವ ಕುರಿತು ಆಟೋ ಚಾಲಕರ ಸಂಘ, ಕಾರು ಚಾಲಕರ ಸಂಘ, ಲಾರಿ ಚಾಲಕರ ಸಂಘ, ಕೆ.ಎಸ್.ಆರ್.ಟಿ.ಸಿ ಇನ್ನೂ ಸ್ಪಷ್ಟಪಡಿಸಿಲ್ಲ. ಅಲ್ಲದೇ, ಜಿಲ್ಲಾ ಜೆಡಿಎಸ್ ಘಟಕ ಕೂಡಾ ಬಂದ್​ಗೆ ಬೆಂಬಲ ನೀಡುವ ಕುರಿತು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.