ಬಂದ್ ಎಫೆಕ್ಟ್.. ದಾವಣಗೆರೆ ನಗರದಲ್ಲಿ ಸಾರಿಗೆ ಸ್ಥಗಿತ, ಅಂಗಡಿ ಮುಗ್ಗಟ್ಟುಗಳು ಬಂದ್

ದಾವಣಗೆರೆ: ಮೋಟಾರ್ ವಾಹನ ಮಸೂದೆ (ತಿದ್ದುಪಡಿ) ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಹಾಗೂ ನಾಳೆ ವಿವಿಧ ಸಂಘಟನೆಗಳು ಭಾರತ್​ ಬಂದ್​ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ಸಾರಿಗೆ ಸ್ಥಗಿತಗೊಂಡಿದ್ದು, ನಗರದ ಹೊಸ ಬಸ್ ನಿಲ್ದಾಣ ಬೀಕೋ ಎನ್ನುತ್ತಿದೆ. ಇನ್ನು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿದಿಲ್ಲ. ಬಸ್‌ಗಾಗಿ ಪ್ರಯಾಣಿಕರ ಕಾದು ಕುಳಿತ್ತಿದ್ದು. ಅಂಗಡಿ ಮುಗ್ಗಟ್ಟುಗಳು ಬಹುತೇಕ ಬಂದ್ ಮಾಡಲಾಗಿದೆ. ಹೊರ ರಾಜ್ಯದ ಹಾಗೂ ದೂರದಿಂದ ಬರುವ ಬಸ್‌ಗಳು ಸಂಚಾರ ಆರಂಭಗೊಂಡಿದೆ. ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಳಿಗ್ಗೆ 9:30ಕ್ಕೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv