ನೀವು ಡೇಟಿಂಗ್​ ಆ್ಯಪ್​ ಉಪಯೋಗಿಸುತ್ತಿದ್ದೀರಾ..? ಹುಶಾರ್​..!

ಸದ್ಯದ ಕಾಲಘಟ್ಟದಲ್ಲಿ ಇಂಟರ್​ನೆಟ್​, ಎಷ್ಟರ ಮಟ್ಟಿಗೆ ವ್ಯಾಪಕವಾಗಿದೆ ಅಂದರೆ ಮನುಷ್ಯನ ಅವಷ್ಯಕ ವಸ್ತುಗಳು ಅವನ ಕೈ ಬೆರಳ ತುದಿಯಲ್ಲಿ ಸಿಗುವಷ್ಟು. ನಾವುಗಳು ಇಂಟರ್​ನೆಟ್​ಗೆ ಎಷ್ಟು ಅವಲಂಬಿತ ಆಗಿದ್ದೇವೆ ಅಂದರೆ, ನಮ್ಮ ದೈನಂದಿನ ಕೆಲಸಗಳಿಗೆ ಮೊಬೈಲ್​ ಆ್ಯಪ್​ಗಳು ಇಲ್ಲದಿದ್ದರೆ ನಮ್ಮ ಬದುಕು ಸಾಗೋದಿಲ್ಲಾ ಅನ್ನೋ ಭ್ರಾಂತಿಗೆ ಹೋಗಿದ್ದೇವೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮನುಷ್ಯ , ತಮ್ಮ ಒಡನಾಡಿಗಳನ್ನು ಮೊಬೈಲ್​ನಲ್ಲೇ ಹುಡುಕುವ ಸಾಹಸ ಮಾಡುವುದನ್ನು ಬಿಟ್ಟಿಲ್ಲಾ. ಅಲ್ಲದೇ, ತನ್ನ ಲೈಂಗಿಕ ಆಸೆ ನೀಗಿಸಿಕೊಳ್ಳಲು ಮೊರೆ ಹೋಗಿದ್ದು ಕೂಡಾ ಒಂದು ಮೊಬೈಲ್​ ಆ್ಯಪ್​ಗೆ. ಮನುಷ್ಯನ ಈ ಆಸೆಗಳನ್ನೇ ಬಂಡವಾಳ ಆಗಿಸಿಕೊಂಡ ಕೆಲವರು ಇಂಥವರ ಜೊತೆ ದಂಧೆ ಶುರು ಮಾಡಿದ್ದಾರೆ. ಹೌದು, ಇದು 21ನೇ ಶತಮಾನದ ಹೊಸ ದಂಧೆ, ‘ಲೈಂಗಿಕ ದಹನ’.
ಸೆಕ್ಸ್, ಬ್ಲ್ಯಾಕ್​​ ಮೇಲ್, ದೋಖಾ..!
ಕಳೆದ, ಫೆಬ್ರವರಿಯಲ್ಲಿ ರಾಹುಲ್ ​(ಹೆಸರು ಬದಲಾಯಿಸಲಾಗಿದೆ) ಎಂಬಾತ, ಡೇಟಿಂಗ್​ ಆ್ಯಪ್​ ಮೂಲಕ ತನ್ನ ಸಂಗಾತಿ ಹುಡುಕಾಟ ನಡೆಸಿದ್ದಾನೆ. ಮೊಬೈಲ್​ ಪರದೆ ಮೇಲೆ ಕಂಡ ತೆಳ್ಳನೆ, ಬೆಳ್ಳನೆ, ಹುಡುಗಿಯ ಪೋಟೋ ನೋಡಿದಾಕ್ಷಣ ಅವಳ ಸ್ನೇಹ ಬೆಳೆಸಿದ್ದಾನೆ. ಹೌದು ಟಿಂಡರ್​ ಡೇಟಿಂಗ್​ ಆ್ಯಪ್ ಮೂಲಕ ಶುರು ಆದ ಸ್ನೇಹ ವಾಟ್ಸ್​ ಆ್ಯಪ್, ​ಪೋನ್​ ಕಾಲ್​ ನಂತರ ವಿಡಿಯೋ ಕಾಲ್​​ಗೂ ಬಂದಿದೆ.
ಮೊದಮೊದಲು ಕುಶಲೋಪರಿಯಲ್ಲಿ ನಡೆದ ಸಂಭಾಷಣೆ ನಂತರ ಮಂಚದವರೆಗೂ ಬಂದಿದೆ. ತನ್ನ ಕಾಮದ ಆಸೆ ತೀರಿಸಿಕೊಳ್ಳಲು ರಾಹುಲ್​ ಆ ಹುಡುಗಿ ಜೊತೆ ವಿಡಿಯೋ ಕಾಲ್​ ಮೊರೆಹೋಗಿದ್ದಾನೆ. ಆಸೆಯ ಉತ್ತುಂಗದಲ್ಲಿದ್ದ ರಾಹುಲ್​ ಅವಳು ಹೇಳಿದ ಮಾತನ್ನು ಚಾಚು ತಪ್ಪದೇ ಕೇಳಿದ್ದಾನೆ. ಬೆತ್ತಲಾದ ರಾಹುಲ್​ನ ವಿಡಿಯೋ ರೆಕಾರ್ಡ್​ ಮಾಡಿಕೊಂಡ ನಂತರ ‘ನಾನು ಹುಡುಗ, ನೀನು ಫೂಲ್​ ಆದೆ’ ಅಂತ ಹೇಳಿ ರಾಹುಲ್​ ಬಳಿ 2 ಸಾವಿರ ಡಾಲರ್​ಗೆ ಬೇಡಿಕೆ ಇಟ್ಟಿದ್ದಾನೆ. ಇಲ್ಲವಾದಲ್ಲಿ ಈ ವಿಡಿಯೋನ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಮರ್ಯಾದೆಗೆ ಅಂಜಿದ ರಾಹುಲ್​ ಅವನಿಗೆ 20 ಡಾಲರ್​ ಟ್ರಾನ್ಸ್​​ಫರ್​ ಮಾಡಿ ಆ ನಂಬರ್​ನ ಬ್ಲಾಕ್​ ಮಾಡಿ ನಂತರ ಪೊಲೀಸ್​ ಮೊರೆ ಹೋಗಿದ್ದಾರೆ.
ಇದೇ ಮೊದಲೇನಲ್ಲಾ, ಇಂತಹ ಪ್ರಕರಣಗಳು ತುಂಬಾ ನಡೆದುಹೋಗಿವೆ. ಹೊಸದಾಗಿ ಮದುವೆಯಾದ ಪುಣೆಯ 28 ವರ್ಷದ ಯುವಕನಿಂದ ಹಿಡಿದು ನಾಸಿಕ್​ನ 65 ವರ್ಷದ ಮುದುಕನ ವರೆಗೂ ಯಾರನ್ನೂ ಈ ದಂಧೆಕೋರರು ಬಿಟ್ಟಿಲ್ಲಾ. ದಿನನಿತ್ಯ ನಮ್ಮ ಅಕ್ಕ-ಪಕ್ಕದಲ್ಲಿ ಇಂತಹ ಪ್ರಕರಣಗಳು ನಡೆದುಹೋಗಿರುತ್ತವೆ. ಹಣ ಕಳೆದು ಕೊಂಡ ಕೆಲವರು ಧೌರ್ಯ ಮಾಡಿ ಮುಂದೆ ಬಂದ್ರೆ ಅದೆಷ್ಟೋ ಮಂದಿ ಮರ್ಯಾದೆಗೆ ಅಂಜಿ ಸುಮ್ಮನಿದ್ದಾರೆ. ಕಾನೂನು ತಜ್ಞರು ಹೇಳುವ ಪ್ರಕಾರ, ಲೈಂಗಿಕ ಸುಖಕ್ಕಾಗಿ ಮೊಬೈಲ್​ ಆ್ಯಪ್ ​ಮೊರೆಹೋಗುವವರೇ ಇವರ ಟಾರ್ಗೆಟ್​. ಆ್ಯಪ್ ಮೂಲಕ ಇವರನ್ನು ಸೆಳೆದು, ಇವರನ್ನು ಪ್ರಚೋದಿಸಿ ತಮ್ಮ ಖೆಡ್ಡಾಗೆ ಬೀಳಿಸಿಕೊಳ್ಳುತ್ತಾರೆ. ಏನೇ ಆಗಲಿ ಇಂತಹ ಮೊಬೈಲ್​ ಆ್ಯಪ್ ಬಳಸುವ ಮುನ್ನಾ ಎಚ್ಚರದಿಂದಿರಿ ಅಥವಾ ಬಳಸದೇ ಇರೋದು ಒಳ್ಳೆಯದು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv