ಕೋಸ್ಟಲ್​​​​ವುಡ್​​​ನ ‘ಪಡ್ಡಾಯಿ’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿಯ ಗರಿ

ನವದೆಹಲಿ: 65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು ಪ್ರಕಟವಾಗಿದ್ದು, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ತುಳು ಭಾಷೆಯ ‘ಪಡ್ಡಾಯಿ’ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಶೇಕ್ಸ್​​​​​​​​​ಪಿಯರ್ ರಚಿತ​​​ ಮ್ಯಾಕ್​ಬೆತ್​​ ನಾಟಕ ಆಧರಿಸಿದ ಈ ತುಳು ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಅಭಯಸಿಂಹ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಪಡ್ಡಾಯಿ ಸಿನೆಮಾ ಮೇ 7ರಿಂದ 12ರವರೆಗೆ ನ್ಯೂಯಾರ್ಕ್​​​​ ನಗರದಲ್ಲಿ ನಡೆಯಲಿರುವ ‘ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್ ಫೆಸ್ಟಿವಲ್‌’ ನಲ್ಲೂ ಪ್ರದರ್ಶನಗೊಳ್ಳಲಿದೆ.

ತುಳು ಸಿನಿಮಾ ಇತಿಹಾಸದಲ್ಲೇ ವಿಶಿಷ್ಟವಾಗಿ ತಯಾರಾಗಿರುವ ಪಡ್ಡಾಯಿ ಸಿನೆಮಾ ಬಿಡುಗಡೆಗೆ ಮುನ್ನವೇ ತುಳು ಸಿನಿರಸಿಕರಲ್ಲಿ ಹೊಸ ಬಗೆಯ ನಿರೀಕ್ಷೆ ಮೂಡಿಸಿದೆ.

Leave a Reply

Your email address will not be published. Required fields are marked *