‘ನಾನು IPS ಅಧಿಕಾರಿಯಾಗಲು ಆ ಕರಾಳ ಘಟನೆಯೇ ಕಾರಣ’

ಬೆಂಗಳೂರು ದಕ್ಷಿಣ ವಿಭಾಗದ ಡೆಪ್ಯುಟಿ ಪೊಲೀಸ್​ ಕಮೀಷನರ್​ ಆಗಿ ಅಣ್ಣಾಮಲೈ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ‘ಸಿಂಗಂ’ ಖ್ಯಾತಿಯ ಅಣ್ಣಾಮಲೈ ಜೊತೆ ಫಸ್ಟ್​​ ನ್ಯೂಸ್​​ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

‘ನಾನು ಐಪಿಎಸ್ ಅಧಿಕಾರಿಯಾಗಲು ಕಾರಣ ಮುಂಬೈ ಅಟ್ಯಾಕ್’ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ. ಆಗ ನಾನು ಲಖ್ನೋದಲ್ಲಿ ಎಂಬಿಎ ಮಾಡ್ತಿದ್ದೆ. ನಮ್ಮ ದೇಶದ ಮೇಲೆ ಅಟ್ಯಾಕ್​ ಆಗಿದ್ದರ ಬಗ್ಗೆ ತುಂಬಾ ಫೀಲ್​ ಆದೆ. ಆಗ, ಸುಮ್ಮನೆ ಮನೆಯಲ್ಲಿ ಕುಳಿತು ಟಿವಿ ನೋಡೋದು ಸರಿಯಲ್ಲ. ಏನಾದ್ರೂ ಮಾಡ್ಲೇಬೇಕು ಅಂತಾ ಅನಿಸಿತು. ಆಗ್ಲೇ ಐಪಿಎಸ್ ಆಗಲು ನಿರ್ಧರಿಸಿದೆ ಎಂದು ಅಣ್ಣಾಮಲೈ ತಾವು ಪೊಲೀಸ್​ ಅಧಿಕಾರಿಯಾಗಿದ್ದರ ಹಿನ್ನೆಲೆಯನ್ನು ಬಿಚ್ಚಿಟ್ಟರು.​

ನಾನು ಯಾವಾಗಲು NEVER GIVE UP ಪಾಲಿಸಿ ಪಾಲನೇ ಮಾಡ್ತಿನಿ. ಯುವಕರು ಜೀವನದಲ್ಲಿ ಸಾಕು ಎಂಬ ಪದಕ್ಕೆ ಶರಣಾಗಲೇಬಾರದು. ಪ್ರತಿದಿನ ನನ್ನ ಬೆಳವಣಿಗೆಗೆ ಏನು ಮಾಡಿದೆ ಅಂತಾ ಪ್ರಶ್ನೆ ಮಾಡಿಕೊಳ್ಳಬೇಕು. ನೀವು ಎತ್ತರಕ್ಕೆ ಬೆಳೆದ ನಂತರ, ಬೆಳೆಯಲು ಇಚ್ಚಿಸುವವರಿಗೂ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.