ಕಳೆದ 44 ದಿನಗಳಲ್ಲಿ 4 ಜನರನ್ನ ಬಲಿ ಪಡೆದ ಹಂದಿಜ್ವರ

ಬೆಂಗಳೂರು: ಎಲ್ಲೆಡೆ ಈಗ H1N1 ಮಹಾಮಾರಿಯ ಹಾವಳಿ ಹೆಚ್ಚಾಗಿದೆ. ಇನ್ನು ಕಳೆದ 44 ದಿನಗಳಲ್ಲಿ ನಾಲ್ವರು ಬೆಂಗಳೂರಿನಲ್ಲಿ ಹೆಚ್​1ಎನ್​1ಗೆ ಬಲಿಯಾಗಿದ್ದಾರೆ. ರಾಜೀವ್​ ಗಾಂಧಿ ಇನ್ಸಿಟ್ಯೂಟ್​ ಆಫ್​ ಚೆಸ್ಟ್​ ಡಿಸೀಸ್​ ಆಸ್ಪತ್ರೆಯ ವರದಿ ಪ್ರಕಾರ ಅಕ್ಟೋಬರ್​ ನಲ್ಲಿಯೇ ಹೆಚ್​1ಎನ್​1ನಿಂದಾಗಿ ಮೂರು ಜನ ಸತ್ತಿದ್ದಾರೆ. ಇನ್ನು ಬೆಂಗಳೂರು ಆರೋಗ್ಯ ಕೇಂದ್ರದ ಪ್ರಕಾರ ಈ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 416 ಕ್ಕೆ ಏರಿದೆ. ಬೆಂಗಳೂರಿನಲ್ಲಿ ಈ ಕಾಯಿಲೆ ಮೊದಲು ಕಾಣಿಸಿಕೊಂಡಿದ್ದು ಕಳೆದ ಆಗಸ್ಟ್​ 27ರಂದು ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದರು. ನಂತರ ಎರಡನೇ ಪ್ರಕರಣ ಅಕ್ಟೋಬರ್​ 1, ನಂತರ ಇನ್ನೆರಡು ಪ್ರಕರಣಗಳು ಅಕ್ಟೋಬರ್​ 7 ರಂದು ದಾಖಲಾಗಿವೆ ಎಂದು ನ್ಯಾಷನಲ್​ ವೆಕ್ಟೊರ್​ ಬಾರ್ನ್​ ಡಿಸೀಸ್​ ಕಂಟ್ರೋಲ್​ ಪ್ರೋಗ್ರಾಂ ಡೈರೆಕ್ಟರ್​ ಎಸ್.ಸಜ್ಜನ್​ ಶೆಟ್ಟಿ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv