ಶ್ರೀಲಂಕಾ ಸ್ಫೋಟ; ಗುಪ್ತಚರ ಇಲಾಖೆ ಎಚ್ಚರಿಕೆ, ಬೆಂಗಳೂರಿನಲ್ಲಿ ಹೈ ಅಲರ್ಟ್

ಬೆಂಗಳೂರು: ಈಸ್ಟರ್​ ಸಂಡೇ ಹಬ್ಬದ ಮೂಡ್​ನಲ್ಲಿದ್ದ ಶ್ರೀಲಂಕಾದಲ್ಲಿ ಸರಣಿ ಬಾಂಬ್​ಗಳು ಸ್ಫೋಟಿಸಿ 350ಕ್ಕೂ ಹೆಚ್ಚು ಜನರ ಸಾವಿಗೆ, 500ಕ್ಕೂ ಹೆಚ್ಚು ಜನರು ಗಾಯಗೊಳ್ಳಲು ಕಾರಣವಾದವು. ಇದರ ಬೆನ್ನಲ್ಲೇ ರಾಜ್ಯ ಕೂಡ ಹೈ ಅಲರ್ಟ್​ ಮೋಡ್​​ಗೆ ಹೋಗಿದೆ. ಅದ್ರಲ್ಲೂ ಬೆಂಗಳೂರು ಸಿಟಿ ಪೊಲೀಸರು ಫುಲ್​​ ಅಲರ್ಟ್ ಆಗಿದ್ದಾರೆ.  ಸಿಟಿ ಪೊಲೀಸರಿಗೆ ಹೈ ಅಲರ್ಟ್ ಆಗಿರಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಫಸ್ಟ್​​ ನ್ಯೂಸ್​​ಗೆ ತಿಳಿಸಿದ್ದಾರೆ. ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಪೋಲಿಸ್ರು ಈ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲ, ಈ ಸಂಬಂಧ ನಗರದ ಎಲ್ಲ ಸ್ಟಾರ್ ಹೋಟೆಲ್​​, ಮಾಲ್, ಚರ್ಚ್, ದೇವಸ್ಥಾನ, ಮಸೀದಿಗಳ ಮುಖ್ಯಸ್ಥರ ಸಭೆ ಕರೆಯಲಾಗಿದೆ. ನಗರ ಪೊಲೀಸ್ ಆಯುಕ್ತರ‌ ‌ಸಮ್ಮುಖದಲ್ಲಿ‌ ಇಂದು ಸಂಜೆ ನಾಲ್ಕು ಗಂಟೆಗೆ ಸಭೆ
ನಡೆಯಲಿದೆ. ಈ ವೇಳೆ ಭದ್ರತೆ ಕುರಿತು ಖಡಕ್ ಎಚ್ಚರಿಕೆ ನೀಡಲು ಪೊಲೀಸರು ತೀರ್ಮಾನಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv