ಗಂಡನ ಪ್ರಾಣ ಉಳಿಸಲು ವಿಡಿಯೋ ಕಾಲ್‌ನಲ್ಲಿ ಬೆತ್ತಲಾದ ಪತ್ನಿ!

ಬೆಂಗಳೂರು: ಇದು ಯಾವ ಸಿನಿಮಾದ ಕ್ರೈಂ ಸ್ಟೋರಿಗಳಿಗೂ ಕಮ್ಮಿ ಇಲ್ಲ! ನಗರದಲ್ಲಿ ಇತ್ತೀಚೆಗೆ ನಡೆದ ಒಂದು ಕ್ರೂರ ಕೃತ್ಯ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ! ಬೆಂಗಳೂರು ಹೆಣ್ಮಕ್ಕಳಿಗೆ, ವೃದ್ಧರಿಗೆ, ಮಕ್ಕಳಿಗೆ ಸೇಫ್ ಅಲ್ಲ ಅನ್ನೋದು ಪದೇ ಪದೇ ಸಾಬೀತು ಆಗುತ್ತಿದೆ. ಇದರ ಮಧ್ಯೆ ಯಾರೂ ಊಹಿಸಿರದ, ದುಷ್ಕರ್ಮಿಗಳ ಇನ್ನೊಂದು ಕ್ರೂರ ಮುಖ ಬೆಂಗಳೂರಿನಲ್ಲಿ ತಲೆ ಎತ್ತಿದೆ ಅನ್ನೋದು ಎಲ್ಲರಲ್ಲೂ ದಿಗಿಲು ಹುಟ್ಟಿಸಿದೆ.

ಹೊಟ್ಟೆ ಪಾಡಿಗಾಗಿ ಕ್ಯಾಬ್​ ಡ್ರೈವಿಂಗ್ ಮಾಡುತ್ತಿದ್ದ ಬಡಪಾಯಿ ಓರ್ವ, ದುಷ್ಟರ ಕೈಗೆ ತಗ್ಲಾಕಿಕೊಂಡು ಪಡಬಾರದ ಹಿಂಸೆ ಅನುಭವಿಸಿದ್ದಾರೆ. ಜೊತೆಗೆ ಸಂಕಷ್ಟದಲ್ಲಿ ಸಿಲುಕಿದ್ದ ಪತಿಯನ್ನ ಖದೀಮರಿಂದ ಬಚಾವ್ ಮಾಡಲು ಮುಂದಾದ ಪತ್ನಿ, ಬೆತ್ತಲಾಗಿ ಕಣ್ಣೀರಿಟ್ಟ ಘೋರ ಕಥೆಯೂ ಇಲ್ಲಿದೆ. ಚಾಂಡಾಳರ ಕೈಗೆ ಸಿಲುಕಿದ್ದ ಕ್ಯಾಬ್ ಡ್ರೈವರ್ ಬದುಕಿ ಬಂದಿದ್ದೇ ಪವಾಡಸದೃಶ್ಯ.

ಏನಿದು ಭಯಾನಕ ಕಥೆ..?
ನವೆಂಬರ್​ 30 ರಂದು ನಾಲ್ಕು ಜನ ಖದೀಮರು ಆಡುಗೋಡಿಯಿಂದ ದೊಮ್ಮಸಂದ್ರಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್​ ಹತ್ತಿಕೊಂಡ ಖದೀಮರು ದೊಮ್ಮಸಂದ್ರಕ್ಕೆ ಕರೆದುಕೊಂಡು ಹೋಗುವಂತೆ ಡ್ರೈವರ್​​ಗೆ ಹೇಳುದ್ರು. ಟ್ರಿಪ್​ ಕಂಪ್ಲೀಟ್​ ಆದ್ಮೇಮಲೆ ಡ್ರೈವರ್​ ದುಡ್ಡು ಕೇಳಿದ. ಆಗ ನಾಲ್ವರು ಖದೀಮರು ಆತನ ಗಾಡಿ ಕೀಯನ್ನ ಕಸಿದುಕೊಂಡು ಚೆನ್ನಾಗಿ ಥಳಿಸಿದ್ದಾರೆ. ಇಷ್ಟೇ ಆಗಿದ್ರೆ ಹೋಗ್ಲಿ ಅನ್ನೋ ಬಹುದಿತ್ತು. ಆದರೆ, ಆ ಖದೀಮರು ಈತನನ್ನ ರಾಮನಗರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆತನದ್ದೇ ಎಟಿಎಂ ಬಳಸಿ 30, ಸಾವಿರ ಹಣ ಡ್ರಾ ಮಾಡಿದ್ದಾರೆ. ಇಷ್ಟು ಸಾಲದು ಅಂತಾ ಮರು ದಿನ ಚೆನ್ನಪಟ್ಟಣದ ಲಾಡ್ಜ್​ ಒಂದರಲ್ಲಿ ಇರಿಸಿ ಚಿತ್ರ ಹಿಂಸೆ ಕೊಡುದ್ದಾರೆ. ಇಷ್ಟಾದ ಮೇಲೆ ಟಾಯ್ಲೆಟ್​ಗೆ ಹೋಗಬೇಕು ಅಂತೇಳಿ ಹೇಗೋ ಅವರಿಂದ ತಪ್ಪಿಸಿಕೊಂಡ ಡ್ರೈವರ್, ಅಲ್ಲಿಂದ ಚೆನ್ನಪಟ್ಟಣ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ಆಗ ಚೆನ್ನಪಟ್ಟಣ ಪೊಲೀಸರು ಘಟನೆ ನಡೆದಿರೋದು ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲ್ಲಿ ಕಂಪ್ಲೇಂಟ್ ಕೊಡಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಡ್ರೈವರ್ ಅಲ್ಲಿಂದ ಆಡುಗೋಡಿ ಪೊಲೀಸ್​ ಠಾಣೆಗೆ ಬಂದು, ದೂರನ್ನ ದಾಖಲಿಸಿದ್ದ. ಆದರೆ, ಈತ ಪೊಲೀಸರ ಮುಂದೆ ಹೇಳಿದ ಮತ್ತೊಂದು ಕಥೆ ಇದಕ್ಕಿಂತಲೂ ಭಯಾನಕವಾಗಿದೆ.

‘‘ಸಾರ್​.. ನಾನು ಇನ್ನೊಂದು ಮುಖ್ಯವಾದ ವಿಷಯ ಹೇಳ್ಬೇಕು.. ಅದನ್ನು ಕಂಪ್ಲೇಂಟ್​ನಲ್ಲಿ ಹೇಳಿಲ್ಲ.. ನಂಗೆ ಮರ್ಯಾದೆ, ಗೌರವ ಮುಖ್ಯ ಸಾರ್.. ಅದ್ಕೋಸ್ಕರ ಕಂಪ್ಲೇಂಟ್​ನಲ್ಲಿ ಈ ವಿಷಯವನ್ನು ಹೇಳೋಕೆ ಸರಿ ಆಗಿಲ್ಲ.. ಅದೇನ್​ ಗೊತ್ತಾ ಸಾರ್.. ನನ್ನನ್ನು ಕಿಡ್ನ್ಯಾಪ್​ ಮಾಡಿದವರು ನಂಗೆ ಇಷ್ಟು ಮಾತ್ರ ಹಿಂಸೆ ಕೊಟ್ಟಿದ್ದಲ್ಲ.. ನಡುರಾತ್ರಿ ನನ್ನ ಹೆಂಡ್ತಿಗೆ ಫೋನ್​ ಮಾಡಿಸಿ ಅವಳಿಗೂ ಹಿಂಸೆ ಕೊಟ್ಟಿದ್ದಾರೆ.. ನೀನು ಜೀವ ಸಹಿತ ಬದುಕಬೇಕಿದ್ರೆ ನಿನ್ನ ಹೆಂಡ್ತಿಗೆ ವಿಡಿಯೋ ಕಾಲ್​​ ಮಾಡಿ, ಅವಳೊಂದಿಗೆ ಬೆತ್ತಲೆಯಾಗಿ ಮಾತಾಡೋಕೆ ಹೇಳು ಅಂತಾ ಟಾರ್ಚರ್​ ಮಾಡಿದ್ರು. ಅದರಂತೆ ರಾತ್ರಿ ಮಲಗಿದ್ದವಳನ್ನು ಎಬ್ಬಿಸಿ ಹೀಗೀಗೆ ಹೇಳಿದಾಗ ಅವಳು ನನ್ನ ಮೇಲೆ ಪ್ರಾಣಾನೇ ಇಟ್ಕೊಂಡಿದ್ದರಿಂದ ಬೆತ್ತಲೆ ನಿಲ್ಲೋಕೆ ಒಪ್ಕೊಂಡಿದ್ದಳು. ಆಗ ಅವರು ವಿಡಿಯೋ ಕಾಲ್​​ ರೆಕಾರ್ಡ್​ ಮಾಡಿರೋದು ನಂಗೆ ಗೊತ್ತಿರಲಿಲ್ಲ ಸಾರ್.. ಮರುದಿನ ನಾನು ಅಲ್ಲಿಂದ ತಪ್ಪಿಸಿಕೊಂಡ ನಂತರ ಅವರು ಮತ್ತೆ ನಂಗೆ ಫೋನ್​ ಮಾಡಿ ವಿಡಿಯೋ ವೈರಲ್​ ಮಾಡೋದಾಗಿ ಬ್ಲ್ಯಾಕ್​ಮೇಲ್ ಮಾಡ್ತಿದ್ದಾರೆ. ನಂಗೆ ಏನೂ ತೋಚುತ್ತಿಲ್ಲ ಸಾರ್.. ದಯವಿಟ್ಟು ನನ್ನನ್ನು ನೀವೇ ಕಾಪಾಡಿ ಪ್ಲೀಸ್​​ ಸರ್.. ನಿಮಗೆ ದಮ್ಮಯ್ಯ ಅಂತೀನಿ’’- ನೊಂದ ಡ್ರೈವರ್

ಹಿಂಸೆಗೆ ಒಳಗಾಗಿರೋ ಕ್ಯಾಬ್​ ಡ್ರೈವರ್​ ಪೊಲೀಸರ ಬಳಿ ಆಫ್​ ದಿ ರೆಕಾರ್ಡ್​ ಹೇಳಿರೋ ಮಾತುಗಳು ಇವು. ಸದ್ಯ ಆರೋಪಿಗಳ ಬೆನ್ನ ಹಿಂದೆ ಬಿದ್ದಿರೋ ಪೊಲೀಸರಿಗೆ, ರಾಬಿನ್​ ಮತ್ತು ಅರುಣ್​ ಅನ್ನೋರ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ನಾಲ್ವರನ್ನು ಬಂಧಿಸಲು ಪೊಲೀಸರು ಬಲೆ ಹೆಣೆದಿದ್ದಾರೆ. ಅದೇನೇ ಇರಲಿ, ತನ್ನ ಪಾಡಿಗೆ ತಾನು ನೆಮ್ಮದಿಯಾಗಿ ಜೀವನ ಮಾಡ್ತಿದ್ದಾತನಿಗೆ ಈ ದುಷ್ಟರು ವಿಕೃತವಾಗಿ ಹಿಂಸೆ ನೀಡಿರೋದು ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv