ಏರ್​ಶೋ ರಿಹರ್ಸಲ್​ ಅಪಘಾತ: ವಿಮಾನಗಳು ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು: ಇಂದು ಯಲಹಂಕದಲ್ಲಿ ಏರ್​​ ಶೋ ರಿಹರ್ಸಲ್​​​​ ವೇಳೆ ಎರಡು ಲಘು ವಿಮಾನಗಳ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಘಟನೆಯ ವಿಡಿಯೋ ಲಭ್ಯವಾಗಿದೆ. ಎರಡು ವಿಮಾನಗಳು ಡಿಕ್ಕಿಯಾದ ಬಳಿಕ ತರಗೆಲೆಯಂತೆ ಕೆಳಗೆ ಬೀಳುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೂರ್ಯಕಿರಣ್​ ಹೆಸರಿನ ಎರಡು ಜೆಟ್​ ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನಗಳು ಧಗಧಗನೆ ಹೊತ್ತಿ ಉರಿದಿವೆ. ಜನವಸತಿ ಪ್ರದೇಶದಲ್ಲೇ ಘಟನೆ ನಡೆದಿದ್ದರಿಂದ ಇಲ್ಲಿನ ನಿವಾಸಿಗಳು ಸದ್ಯ ಆತಂಕಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್​ ಪೈಲೆಟ್​​​ಗಳ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಪೈಲೆಟ್​​ಗಳು ಪ್ಯಾರಾಚೂಟ್​ ಮೂಲಕ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv