ಎಂ.ಜಿ. ರೋಡಲ್ಲಿ ಹೋಗುವಾಗ ಹುಷಾರ್! ಹೀಗೆಲ್ಲಾ ಆಗುತ್ತೆ ನೋಡಿ?

ಬೆಂಗಳೂರು: ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಯಾರು ಯಾವಾಗ ಬಂದು ಏನನ್ನು ಕದಿಯುತ್ತಾರೆ ಎಂಬುದೇ ತಿಳಿಯುವುದಿಲ್ಲ. ಹಾಗಾಗಿ ಯಾವುದಕ್ಕೂ ಸ್ವಲ್ಪ ಹುಷಾರಾಗಿರಿ. ಯಾಕಂದ್ರೆ, ಸದ್ದಿಲ್ಲದೇ ಬಂದು ಕಳ್ಳತನ ಮಾಡುವ ಕಳ್ಳರು ಎಂ.ಜಿ. ರೋಡಿನಲ್ಲಿದ್ದಾರೆ. ಇದಕ್ಕೆ ಸಾಕ್ಷಿ, ಕಳೆದ ಅಕ್ಟೋಬರ್​ 3 ರಂದು ಎಂ.ಜಿ ರಸ್ತೆಯಲ್ಲಿ ನಡೆದ ಮೊಬೈಲ್​ ಕಳ್ಳತನದ ಸಿಸಿ ಟಿವಿ ದೃಶ್ಯಾವಳಿ.

ಪ್ರಸನ್ನ ಎಂಬುವವರು ತಡರಾತ್ರಿ ಸ್ನೇಹಿತರ ಜೊತೆ ಹೋಟೆಲ್​ ಒಂದರಲ್ಲಿ ಊಟ ಮುಗಿಸಿ ಹೊರ ಬರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಆತನ ಬಳಿ ಇದ್ದ ಮೊಬೈಲ್​ ಫೋನನ್ನು ಬೈಕ್​ನಲ್ಲಿ ಬಂದ ಕಳ್ಳರಿಬ್ಬರು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಜನರಲ್ಲಿ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡರು ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಸದ್ಯ ಈ ದೃಶ್ಯ ವೈರಲ್​ ಆಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv